ETV Bharat / state

ಸಿದ್ದರಾಮಯ್ಯ ಎಲ್ಲಿ ಸ್ಪರ್ಧಿಸಿದರೂ ಗೆಲ್ತಾರೆ: ಶಿವರಾಜ ತಂಗಡಗಿ ವಿಶ್ವಾಸ - ಕೊಪ್ಪಳ

ವಿಪಕ್ಷ ನಾಯಕ ರಾಜ್ಯದ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧಿಸಿದರೂ ಗೆಲ್ಲುತ್ತಾರೆ- ಶಿವರಾಜ ತಂಗಡಗಿ ವಿಶ್ವಾಸ- ಅಭಿವೃದ್ಧಿಗಾಗಿ ಅವರಿಗೆ ಆಹ್ವಾನ ಎಂದ ಕೊಪ್ಪಳ ಕಾಂಗ್ರೆಸ್ ಜಿಲ್ಲಾಧ್ಯಕ್ಷ

Shivaraj Tangadagi
ಕೊಪ್ಪಳ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ
author img

By

Published : Jul 23, 2022, 9:37 AM IST

ಕೊಪ್ಪಳ: ಸಿದ್ದರಾಮಯ್ಯ ಅವರು ಬಾದಾಮಿ ಕ್ಷೇತ್ರವನ್ನ ಒಂದು ಮಾದರಿ ಕ್ಷೇತ್ರವನ್ನಾಗಿ ಬದಲಾಯಿಸಿದ್ದಾರೆ. ಹಾಗಾಗಿ ಅವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧಿಸಿದರೂ ಗೆಲ್ಲುತ್ತಾರೆ ಎಂದು ಕೊಪ್ಪಳ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ವಿಶ್ವಾಸ ವ್ಯಕ್ತಪಡಿಸಿದರು.

ಕೊಪ್ಪಳ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ

ಅಭಿವೃದ್ಧಿಗಾಗಿ ಎಲ್ಲರೂ ಅವರನ್ನ ಆಹ್ವಾನಿಸುತ್ತಾರೆ. ಅವರು ಕೇವಲ ಕುರುಬರಿಂದ‌ ಗೆಲ್ತಾರೆ ಎನ್ನುವುದು ತಪ್ಪು. ಸಿದ್ದರಾಮಯ್ಯ ಕೇವಲ ಕುರುಬ ನಾಯಕರಲ್ಲ, ಸರ್ವ ಜನಾಂಗದ ನಾಯಕರಾಗಿದ್ದಾರೆ. ಸಿದ್ದರಾಮಯ್ಯ ವ್ಯಕ್ತಿ ಅಲ್ಲ, ಅವರೊಂದು ಶಕ್ತಿಯಾಗಿದ್ದಾರೆ ಎಂದರು. ಬಿಜೆಪಿ ಪಕ್ಷದಲ್ಲಿರುವವರೆಲ್ಲ ನಮ್ಮ ಪ್ರಾಡೆಕ್ಟ್. ಅವರೆಲ್ಲ ಸ್ವಂತ ಬಲದಿಂದ ಅಧಿಕಾರ ಹಿಡಿದವರಲ್ಲ. ಅದು ಆಪರೇಷನ್ ಸರ್ಕಾರ. ಬಿಜೆಪಿಗೆ ಹೋಗಿರುವುದು ಟೆಸ್ಟ್ ಟ್ಯೂಬ್ ಬೇಬಿಗಳು ಎಂದು ಲೇವಡಿ ಮಾಡಿದರು.

ಎಐಸಿಸಿಯಿಂದ ಪ್ರತಿ ಜಿಲ್ಲೆಯಿಂದ 100 ಜನರು ಸಮೀಕ್ಷೆ ಮಾಡುತ್ತಿದ್ದಾರೆ. ಸಮೀಕ್ಷೆ ಮುಗಿದ ನಂತರ ಯಾವ ಅಭ್ಯರ್ಥಿ ಎಲ್ಲಿ ಸ್ಪರ್ಧಿಸಬೇಕು ಎಂಬುದನ್ನ ನಿರ್ಧರಿಸಲಾಗುವುದು ಎಂದು ಇದೇ ವೇಳೆ ಹೇಳಿದ್ರು.

ಇದನ್ನೂ ಓದಿ: ನೀವು ಹೇಳಿದಂತೆ ಕೇಳ್ಕೊಂಡು ಇರುತ್ತೇನೆ ಎಂದು ಬ್ರಿಟಿಷರಿಗೆ ಸಾವರ್ಕರ್ ಕ್ಷಮಾಪಣಾ ಬರೆದು‌ಕೊಟ್ಟಿದ್ರು: ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.