ETV Bharat / state

ಕಾಮುಕ ಶಿಕ್ಷಕ ಜೀವಮಾನವಿಡಿ ಜೈಲಿನಲ್ಲಿರುವಂತೆ ಮಾಡಬೇಕು : ಶಿವರಾಜ ತಂಗಡಗಿ - ಶಿಕ್ಷಕನ ವಿರುದ್ಧ ಎಫ್ಐಆರ್ ದಾಖಲು

ಮಕ್ಕಳು-ಮಹಿಳೆಯರ ಜೊತೆ ಕೊಪ್ಪಳ ಶಿಕ್ಷಕನ ಕಾಮದಾಟದ ವಿಡಿಯೋ ವೈರಲ್ ಆಗಿರುವ ಬಗ್ಗೆ ಮಾಜಿ ಸಚಿವ ಶಿವರಾಜ ತಂಗಡಗಿ ಪ್ರತಿಕ್ರಿಯೆ ನೀಡಿದ್ದಾರೆ. ಆ ದುಷ್ಟ ಶಿಕ್ಷಕನಿಗೆ ಜೀವಮಾನದಲ್ಲೇ ಅವನು ಜೈಲಿನಿಂದ ಹೊರಗೆ ಬರದಂತೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದಿದ್ದಾರೆ.

Shivaraj Tangadagi
ಮಾಜಿ ಸಚಿವ ಶಿವರಾಜ ತಂಗಡಗಿ
author img

By

Published : Jul 2, 2022, 7:41 PM IST

ಕೊಪ್ಪಳ: ನೆರೆಮನೆಯ ಮಹಿಳೆಯರು ಮತ್ತು ಮಕ್ಕಳ ಜೊತೆಗೆ ಶಿಕ್ಷಕ ಕಾಮದಾಟವಾಡಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಶಿಕ್ಷಕನ ವಿರುದ್ಧ ಎಫ್ಐಆರ್ ದಾಖಲಾಗಿದೆ. ಈ ಬಗ್ಗೆ ಮಾಜಿ ಸಚಿವ ಶಿವರಾಜ ತಂಗಡಗಿ ಪ್ರತಿಕ್ರಿಯೆ ನೀಡಿದ್ದು, ಆತನಿಗೆ ಸಾಮಾನ್ಯ ಶಿಕ್ಷೆ ಆಗಬಾರದು. ಆತನನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಹೇಳಿದ್ದಾರೆ.

ನನ್ನ ಕ್ಷೇತ್ರದಲ್ಲಿ ಇಂತಹ ಒಬ್ಬ ದುಷ್ಟ ಶಿಕ್ಷಕನಿದ್ದಾನೆ ಎನ್ನುವುದೇ ಖೇದಕರ ಸಂಗತಿಯಾಗಿದೆ. ಒಬ್ಬ ಶಿಕ್ಷಕನಾಗಿ ಆ ವ್ಯಕ್ತಿ ಅಂತಹ ಕೃತ್ಯದಲ್ಲಿ ತೊಡಗಿದ್ದು ಖಂಡನೀಯ. ಯಾರು ದೂರು ನೀಡುತ್ತಾರೋ, ಬಿಡುತ್ತಾರೋ ಗೊತ್ತಿಲ್ಲ. ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಅವನನ್ನು ಬಂಧಿಸಬೇಕು. ಆತನಿಗೆ ಶಿಕ್ಷೆಯಾಗುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಶಿವರಾಜ ತಂಗಡಗಿ ಅವರು ಹೇಳಿದ್ದಾರೆ.

ಶಿಕ್ಷಕನಿಗೆ ಜೀವಮಾನ ಜೈಲಿನಲ್ಲಿರುವಂತೆ ಮಾಡಬೇಕು

ಈ ಪ್ರಕರಣದಿಂದಾಗಿ ಮಕ್ಕಳನ್ನು ಶಾಲೆಗೆ ಕಳಿಸಲು ಪಾಲಕರು ಚಿಂತಿಸುವಂತಾಗಿದೆ. ಇಂತಹ ಪ್ರಕರಣದಿಂದಾಗಿ ಒಳ್ಳೆಯ ಶಿಕ್ಷಕರ ಮೇಲೂ ಅನುಮಾನ ಮೂಡುವಂತೆ ಮಾಡಿದೆ. ಜೀವಮಾನದಲ್ಲೇ ಅವನು ಜೈಲಿನಿಂದ ಹೊರಗೆ ಬರದಂತೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ: ಮಕ್ಕಳು-ಮಹಿಳೆಯರ ಜೊತೆ ಕೊಪ್ಪಳ ಶಿಕ್ಷಕನ ಕಾಮದಾಟದ ವಿಡಿಯೋ ವೈರಲ್​.. ಟೀಚರ್​ ಎಸ್ಕೇಪ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.