ETV Bharat / state

ಗಂಗಾವತಿಯ ವಿವಾದಿತ ಸ್ಥಳದಲ್ಲಿ ಮೂರು ದಿನ ನಿಷೇಧಾಜ್ಞೆ ಜಾರಿ

ಗಂಗಾವತಿ ನಗರದ ಲಕ್ಷ್ಮಿಕ್ಯಾಂಪ್​ನ ಗಂಟೆ ಆಂಜನೇಯ ದೇವಸ್ಥಾನದ ಸುತ್ತಮುತ್ತಲಿನ ವಿವಾದಿತ ಸ್ಥಳದ ಸುತ್ತಲಿನ 300 ಮೀಟರ್ ಪ್ರದೇಶದವರೆಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶಕ್ಕೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ ಎಂದು ತಹಶೀಲ್ದಾರ್​ ಯು. ನಾಗರಾಜ್ ತಿಳಿಸಿದ್ದಾರೆ.

ಗಂಗಾವತಿ
ಗಂಗಾವತಿ
author img

By

Published : Jun 1, 2022, 7:39 PM IST

ಗಂಗಾವತಿ(ಕೊಪ್ಪಳ): ನಗರದ ಲಕ್ಷ್ಮಿಕ್ಯಾಂಪ್​​ನ ಗಂಟೆ ಆಂಜನೇಯ ದೇವಸ್ಥಾನದ ಹಿಂಭಾಗದಲ್ಲಿ ನಡೆದ ಕೋಮು ಗಲಭೆಗೆ ಸಂಬಂಧಿಸಿದಂತೆ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ತಹಶೀಲ್ದಾರ್​ ಯು. ನಾಗರಾಜ್ ಮೂರು ದಿನಗಳ ಕಾಲ ನಿಷೇಧಾಜ್ಞೆ ಜಾರಿ ಮಾಡಿ ಆದೇಶ ಹೊರಡಿಸಿದ್ದಾರೆ.

section 144 Implimented near anjaneya temple at Gangavathi
ಗಂಗಾವತಿಯ ವಿವಾದಿತ ಸ್ಥಳದ ಸುತ್ತ ಮೂರುದಿನ ನಿಷೇಧಾಜ್ಞೆ ಜಾರಿ

ಜೂನ್ 1ರ ಬೆಳಗ್ಗೆ 10 ಗಂಟೆಯಿಂದ ಜೂನ್ 3ರ ಮಧ್ಯರಾತ್ರಿ 12 ಗಂಟೆವರೆಗೆ ನಿಷೇಧಾಜ್ಞೆ ಜಾರಿ ಮಾಡಿದ್ದಾರೆ. ವಿವಾದಿತ ಸ್ಥಳದಿಂದ ಸುತ್ತಲೂ 300 ಮೀಟರ್ ಪ್ರದೇಶದವರೆಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶಕ್ಕೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ ಎಂದು ತಹಶೀಲ್ದಾರ್​ ಉಲ್ಲೇಖಿಸಿದ್ದಾರೆ.

ವಿವಾದಿತ ಸ್ಥಳದಲ್ಲಿ ಪ್ರಾರ್ಥನೆ ಮಾಡುವ ಸಂಬಂಧ ಹಿಂದೂ ಮತ್ತು ಮುಸ್ಲಿಂ ಸಮುದಾಯದಲ್ಲಿ ಕೋಮು ಸಂಘರ್ಷ ಉಂಟಾಗುವ ಸಾಧ್ಯತೆ ಇದೆ. ಈ ಕಾರಣಕ್ಕೆ ಸಾರ್ವಜನಿಕ ಹಿತ ಕಾಯುವ ಮತ್ತು ಆಸ್ತಿಪಾಸ್ತಿ ಕಾಪಾಡುವ ದೃಷ್ಟಿಯಿಂದ ನಿಷೇಧಾಜ್ಞೆ ಜಾರಿ ಮಾಡಲಾಗಿದೆ ಎಂದು ತಹಶೀಲ್ದಾರ್​ ಯು. ನಾಗರಾಜ್ ತಿಳಿಸಿದ್ದಾರೆ.

ಓದಿ: ಪಿಎಸ್ಐ ಪರೀಕ್ಷಾ ಅಕ್ರಮ ಪ್ರಕರಣ : ಆರ್ ಡಿ ಪಾಟೀಲ್​ನ ಮತ್ತಿಬ್ಬರು ಆಪ್ತರ ಬಂಧನ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.