ETV Bharat / state

ಶಿವರಾಜ್​​ ತಂಗಡಗಿ ವಿರುದ್ಧ ಹರಿಹಾಯ್ದ ಸಂಗಣ್ಣ ಕರಡಿ

ನನ್ನ ಹಾಗೂ ಶಿವರಾಜ್​ ತಂಗಡಗಿ ಅವರ ಆಸ್ತಿ ಎಷ್ಟಿದೆ ಎಂಬುದು ತನಿಖೆಯಾಗಲಿ. ನಮ್ಮಿಬ್ಬರ ಆಸ್ತಿ ಎಷ್ಟಿದೆ ಎಂಬ ಮಾಹಿತಿ ಹೊರ ಬರಲಿ ಎಂದು ಸಂಸದ ಸಂಗಣ್ಣ ಕರಡಿ ಸವಾಲು ಹಾಕಿದರು.

author img

By

Published : Jul 10, 2020, 4:35 PM IST

sanganna
sanganna

ಕೊಪ್ಪಳ: 1978ರಿಂದ ರಾಜಕೀಯದಲ್ಲಿರುವ ನನ್ನ ಹಾಗೂ ಮಾಜಿ ಸಚಿವ ಶಿವರಾಜ್​ ತಂಗಡಗಿ ಅವರ ಆಸ್ತಿ ಎಷ್ಟಿದೆ ಎಂದು ಕಂಪೇರ್ ಮಾಡೋಣ. ಶಿವರಾಜ್​​ ತಂಗಡಗಿ ಆಸ್ತಿ ಎಷ್ಟಿದೆ ಎಂಬುದು ಗೊತ್ತಾಗಲಿ ಎಂದು ಸಂಸದ ಸಂಗಣ್ಣ ಕರಡಿ ಹೇಳಿದ್ದಾರೆ.

ಕೊಪ್ಪಳದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಂಗಾವತಿ ಅಮೃತ ಸಿಟಿ ಯೋಜನೆಯ ಕಾಮಗಾರಿ ಕಳಪೆಯಾಗಿದೆ ಎಂದು ನಾನು ಪತ್ರ ಬರೆದಿರುವೆ. ಇದು ನನ್ನ ಅಭಿಪ್ರಾಯ. ಗಂಗಾವತಿ ಶಾಸಕರು ಸರಿ ಇದೆ ಎಂದು ಹೇಳಿರೋದು ಅವರ ಅಭಿಪ್ರಾಯ. ಈ ಬಗ್ಗೆ ನಾನು ಸಚಿವರ ಮುಂದೆಯೂ ಹೇಳಿರುವೆ. ಅಭಿಪ್ರಾಯ ಹೇಳಬಾರದು ಅಂತೇನೂ ಇಲ್ಲ. ಕಾಮಗಾರಿ ಬಗ್ಗೆ ತನಿಖೆ ನಡೆಸಲು ಸಚಿವರು ಜಿಲ್ಲಾಧಿಕಾರಿಗಳಿಗೂ ಸೂಚಿಸಿದ್ದಾರೆ ಎಂದರು.

ಶಿವರಾಜ್​ ತಂಗಡಗಿ ವಿರುದ್ಧ ಹರಿಹಾಯ್ದ ಸಂಗಣ್ಣ ಕರಡಿ

ಈ ವಿಷಯಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಶಿವರಾಜ್​ ತಂಗಡಗಿ ನನ್ನ ಬಗ್ಗೆ ಆರೋಪ ಮಾಡಿದ್ದಾರೆ. ಈ ಯೋಜನೆಯ ಬಗ್ಗೆ ಸಂಸದರಿಗೆ ಏನೂ ಸಿಕ್ಕಿಲ್ಲ. ಹೀಗಾಗಿ ಕಾಮಗಾರಿ ಕಳಪೆಯಾಗಿದೆ ಎಂದು ಪತ್ರ ಬರೆದಿದ್ದಾರೆ ಎಂದು ಮಾಜಿ ಸಚಿವ ಶಿವರಾಜ್​​ ತಂಗಡಗಿ ಆರೋಪ ಮಾಡಿದ್ದಾರೆ. ಕಾಮಾಲೆ ಕಣ್ಣಿನವರಿಗೆ ಎಲ್ಲದೂ ಹಳದಿಯಾಗಿಯೇ ಕಾಣುತ್ತದೆ. ಅವರು ಏನು ಬೇಕಾದರೂ ಹೇಳ್ತಾರೆ. ಆರೋಪ ಮಾಡುವುದರಲ್ಲಿಯೂ ಒಂದು ಹುರುಳು ಇರಬೇಕು. ಆದರೆ ಮಾಜಿ ಸಚಿವ ತಂಗಡಗಿ ಮಾಡುವ ಆರೋಪದಲ್ಲಿ ಹುರುಳಿಲ್ಲ ಎಂದರು.

ನಾನು 1978ರಿಂದ ರಾಜಕೀಯ ಜೀವನದಲ್ಲಿದ್ದೇನೆ. ಜನರು ಅಲ್ಲಿಂದ ಇಲ್ಲಿಯವರೆಗೂ ನನಗೆ ಆಶೀರ್ವಾದ ಮಾಡಿದ್ದಾರೆ. ಶಿವರಾಜ್​ ತಂಗಡಗಿ ಅವರು ಎಷ್ಟು ಬಾರಿ ಶಾಸಕರಾಗಿದ್ದಾರೆ. ಅವರ ಆಸ್ತಿ ಎಷ್ಟಿದೆ ಎಂಬುದು ತನಿಖೆಯಾಗಲಿ. ನಮ್ಮ ಆಸ್ತಿ ಎಷ್ಟಿದೆ, ಅವರ ಆಸ್ತಿ ಎಷ್ಟಿದೆ ಎಂಬುದು ಹೊರಗೆ ಬರಲಿ ಎಂದು ಸವಾಲು ಹಾಕಿದರು.

ಅಲ್ಲದೆ ಕನಕಗಿರಿ ಶಾಸಕ ಬಸವರಾಜ ದಡೇಸಗೂರು ಅವರ ಬಗ್ಗೆಯೂ ತಂಗಡಗಿ ಹಗುರವಾಗಿ ಮಾತಾಡ್ತಾರೆ ಎಂದು ಸಂಸದ ಸಂಗಣ್ಣ ಕರಡಿ ಗರಂ ಆದರು.

ಲಾಖ್​ಡೌನ್ ಸಂದರ್ಭದಲ್ಲಿ ರೈತರಿಗೆ, ನೇಕಾರರಿಗೆ, ಆರ್ಥಿಕವಾಗಿ ದುರ್ಬಲವಾಗಿರುವವರು ಸೇರಿದಂತೆ ಸಂಕಷ್ಟದಲ್ಲಿರುವ ಜನರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ನೆರವು ನೀಡಿವೆ. ಕೊರೊನಾ ನಿಯಂತ್ರಣದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸಾಕಷ್ಟು ಕೆಲಸ ಮಾಡಿವೆ. ಕೊಪ್ಪಳ ಜಿಲ್ಲೆಯಲ್ಲಿ ಕೊರೊನಾ ಕಂಟ್ರೋಲ್ ಮಾಡುವಲ್ಲಿ ಹಿಂದಿನ ಜಿಲ್ಲಾಧಿಕಾರಿಗಳು ಸಾಕಷ್ಟು ಕೆಲಸ ಮಾಡಿದ್ದಾರೆ ಎಂದು ಸ್ಮರಿಸಿದರು.

ಕೊರೊನಾ ವಾರಿಯರ್ಸ್ ತಮ್ಮ ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ಅವರನ್ನು ಬೆನ್ನು ತಟ್ಟುವ ಕೆಲಸ ಮಾಡಬೇಕಿದೆ. ಅವರಿಗೆ ಪಿಪಿಇ ಕಿಟ್ ಸೇರಿದಂತೆ ಇನ್ನಿತರೆ ಸೌಲಭ್ಯಗಳನ್ನು ಹೆಚ್ಚಿಸಬೇಕಿದೆ. ಇದರ ಜೊತೆಗೆ ಸಾರ್ವಜನಿಕರು ಸ್ವಯಂ ಜಾಗೃತರಾಗಬೇಕಿದೆ. ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸ್ವಚ್ಛತೆ, ಸಾಮಾಜಿಕ ಅಂತರ ಕಾಪಾಡುವುದು ಸೇರಿದಂತೆ ಅನೇಕ ಸುರಕ್ಷತಾ ಕ್ರಮಗಳನ್ನು ಜನರು ಸ್ವಯಂ ಆಗಿ ತೆಗೆದುಕೊಳ್ಳಬೇಕು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.