ETV Bharat / state

ಜನರ ಹೃದಯ ಗ್ರಂಥಿಗಳಲ್ಲಿ ಸದಾ ಉಳಿದ ಸಂತ ವಸಂತ ಸಿದ್ದೇಶ್ವರ ಸ್ವಾಮೀಜಿ : ಗವಿಶ್ರೀ ಸ್ಮರಣೆ - ETv Bharat Kannada News

ಸಿದ್ದೇಶ್ವರ ಸ್ವಾಮೀಜಿಯವರು ಈ ಶತಮಾನದ ಯುಗಪುರುಷರು- ಜನರ ಹೃದಯ ಗ್ರಂಥಿಗಳಲ್ಲಿ ಸದಾ ಉಳಿದ ಸಂತ- ಸಿದ್ದೇಶ್ವರ ಶ್ರೀಗಳೊಂದಿಗಿನ ತಮ್ಮ ಒಡನಾಟ ನೆನೆದು ಭಾವುಕರಾದ ಗವಿಸಿದ್ದೇಶ್ವರ ಮಹಾಸ್ವಾಮೀಜಿ

Shri Gavisiddeswara Mahaswamiji of Koppal Gavi Math
ಕೊಪ್ಪಳ ಗವಿಮಠದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮೀಜಿ
author img

By

Published : Jan 3, 2023, 7:22 PM IST

ಸಿದ್ದೇಶ್ವರ ಸ್ವಾಮೀಜಿಯೊಂದಿಗಿನ ಒಡನಾಟ ನೆನೆದು ಗವಿಸಿದ್ದೇಶ್ವರ ಮಹಾಸ್ವಾಮೀಜಿ ಭಾವುಕ

ಕೊಪ್ಪಳ : ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಅವರು ಈ ಶತಮಾನದ ಯುಗಪುರುಷರು ಎಂದು ಕೊಪ್ಪಳ ಗವಿಮಠದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮೀಜಿ ಸಂತಾಪ ಸೂಚಿಸಿದರು.

ಸಿದ್ದೇಶ್ವರ ಸ್ವಾಮೀಜಿ ಅವರಿಗೆ ಯಾವುದೇ ಪಂಥಗಳಿರಲಿಲ್ಲ. ಯಾವುದೇ ಗ್ರಂಥಕ್ಕೆ ಅಂಟಿಕೊಳ್ಳಲಿಲ್ಲ, ಜನರ ಹೃದಯ ಗ್ರಂಥಿಗಳಲ್ಲಿ ಸದಾ ಉಳಿದ ಸಂತ ವಸಂತ ಸಿದ್ದೇಶ್ವರ ಅಪ್ಪಾಜಿ ಅವರು ಎಂದು ಶ್ರೀಗಳೊಂದಿಗಿನ ಒಡನಾಟವನ್ನು ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮೀಜಿ ಸ್ಮರಿಸಿದರು. ಶ್ರೀಗಳು ಸುಳಿದೆಡೆಯೆಲ್ಲ ಸುವಿಧಾನ, ಸಮಾಧಾನ. ಅವರು ನಿಂತ ನಿಲುವು ಸತ್ಯದ ಒಲವು, ಮಾಯ ಮುಟ್ಟದ ಕಾಯ, ಭ್ರಮೆ ಇಲ್ಲದ ಭಾವ. ಲೋಕಾಂತವನ್ನು ಪ್ರೀತಿಸಿ ತಾವು ಏಕಾಂತವಾಗಿ ಉಳಿದವರು. ಚಿಂತೆಗಳ ಮಧ್ಯೆ ನಿಶ್ಚಿಂತನಾಗಿ ಹೇಗೆ ಬದುಕಬೇಕು ಎಂಬುದನ್ನು ಕಲಿಸಿದ ಜೀವನ್ಮುಕ್ತರು ಎಂದು ಶ್ರೀಗಳು ಬಣ್ಣಿಸಿದರು.

ಕೆಲವು ದಿನಗಳ ಹಿಂದೆ‌ ನಾನು ಪೂಜ್ಯರ ದರ್ಶಕ್ಕೆ ಹೋಗಿದ್ದೆ, ಆಗ ನಾವು ಹೊರಟು ನಿಂತಾಗ ಅವರು ನಮ್ಮನ್ನು ಕೆಲಹೊತ್ತು ನಿಲ್ಲಿಸಿ ಹಲವು ವಿಮರ್ಶೆ ಮಾಡಿದ್ದರು. ನಾನು ಟೆಲಿಸನ್ ಕವಿಯ Iam an infant crying in night, crying for the light.. ಈ ಎರಡು ಸಾಲು ಹೇಳಿದ್ದೆ. ಈ ಸಾಲುಗಳ ಬಗ್ಗೆ ಸುಮಾರು ಒಂದೂವರೆ ತಾಸು ವಿಮರ್ಶೆ ನಡೆಸಿ ಅದರ ತಿಳುವು, ಹೊಳವನ್ನು ವಿವರಿಸಿದ್ದರು. ಅವರೊಬ್ಬ ಸದಾ ಜ್ಞಾನವನ್ನೇ ಪ್ರೀತಿಸಿ ಜನರ ಹೃದಯದಲ್ಲಿ ಜ್ಞಾನದ ದೀಪ ಹಚ್ಚಿದ ಶ್ರೇಷ್ಠ ಸಂತ ಎಂದು ಹೇಳಿದರು.

ಜನರ ಅಂತರಂಗದಲ್ಲಿ ಅವರು ಸದಾ ಮಿನುಗುವ ದೀಪ.. ಸಿದ್ದೇಶ್ವರ ಶ್ರೀಗಳ ದೇಹ ದೂರವಾಗಿರಬಹುದು, ಅವರ ದೇಹ ಕಣ್ಣಿನಿಂದ ದೂರವಾದರೂ, ಮಣ್ಣಿನಿಂದ ಮರೆಯಾದರೂ ಸಹ ಈ ನಾಡಿನ ಜನರ ಅಂತರಂಗದಲ್ಲಿ ಹಚ್ಚಿದ ಆರದ ದೀಪ ಅವರು ಎಂದು ಗವಿಸಿದ್ದೇಶ್ವರ ಶ್ರೀಗಳು ಭಾವುಕರಾದರು. ನಾವು ವರ್ಷಕ್ಕೊಮ್ಮೆ ಕಾರ್ತಿಕ ದೀಪ ಹಚ್ಚಿರಬಹುದು, ವರ್ಷಕ್ಕೊಂದು ಲಕ್ಷ ದೀಪೋತ್ಸವ ಮಾಡಿರಬಹುದು. ಆದರೆ ಸಿದ್ದೇಶ್ವರ ಶ್ರೀಗಳು ತಮ್ಮ ಜ್ಞಾನದ ಮಾತುಗಳ ಮೂಲಕ ವಿಶ್ವದ ಜನರಿಗೆ ಪ್ರತಿನಿತ್ಯ ಜ್ಞಾನದ ಆರತಿ ಮಾಡಿದರು.

ಅವರು ಹೋದಲ್ಲೆಲ್ಲ ಲಕ್ಷ ಲಕ್ಷ ಜನರು ಪ್ರವಚನ ಕೇಳಲು ಸೇರುತ್ತಿದ್ದರು. ಅವರ ಬದುಕೇ ನಿತ್ಯ ಕಾರ್ತಿಕೋತ್ಸವ. ಕೊಪ್ಪಳದ ಬಗ್ಗೆ ಅಪಾರ ಪ್ರೇಮ ಹೊಂದಿದ್ದ ಸ್ವಾಮೀಜಿ ಅವರು 2017 ರಲ್ಲಿ ಗವಿಮಠ ಜಾತ್ರೆ ಉದ್ಘಾಟನೆಗೆ ಆಗಮಿಸಿದ್ದರು. ಹಾಗೂ 2000 ವಿದ್ಯಾರ್ಥಿಗಳ ವಸತಿ ನಿಲಯದ ಎರಡನೇ ಮಹಡಿ ಕಟ್ಟಡದ ಉದ್ಘಾಟನೆಗೂ ಆಗಮಿಸಿದ್ದರು ಎಂದು ಅಂದಿನ ದಿನಗಳನ್ನು ಮೆಲುಕು ಹಾಕಿದರು.

ಶಿಕ್ಷಣ ಕ್ಷೇತ್ರದ ವಿಚಾರ ಗೋಷ್ಠಿಯೊಂದಕ್ಕೆ ಶ್ರೀಮಠಕ್ಕೆ ಆಗಮಿಸಿ ತಮ್ಮ ಜ್ಞಾನದ ಬೆಳಕು ಹರಿಸಿದ್ದರು. ಗವಿಮಠ ಜಾತ್ರೆ ನೋಡಿ ಕವಿ ರವೀಂದ್ರರ ಮಾತುಗಳನ್ನು ನೆನಪಿಸಿಕೊಂಡಿದ್ದರು. ಈ ಜಗತ್ತಿನ ಜಾತ್ರೆ ನೋಡಲು ಮನುಷ್ಯರಿಗೆ ದೇವನು ನೀಡಿದ ಆಮಂತ್ರಣ ಎಂದು ಹೇಳಿದ್ದರು ಎಂದು ಗವಿಶ್ರೀಗಳು ಸ್ಮರಿಸಿದರು.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು ಕಳೆದ ಒಂದು ವಾರದಿಂದ ತೀವ್ರ ಅನಾರೋಗ್ಯಕ್ಕೆ ಸಿಲುಕಿದರು. ಸೋಮವಾರ ಸಂಜೆ 6:30 ರ ಸುಮಾರಿಗೆ ಇಹಲೋಕ ತ್ಯಜಿಸಿದರು. ಕರುನಾಡು ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಶ್ರೀಗಳ ಚೇತರಿಕೆಗೆ ಅನುಯಾಯಿಗಳ ಮತ್ತು ಭಕ್ತರ ಪ್ರಾರ್ಥನೆ ಫಲಿಸದೇ ಶ್ರೀಗಳು ಲಿಂಗೈಕ್ಯರಾದರು. ಅವರ ಅಗಲಿಕೆಯಿಂದ ಕರ್ನಾಟಕ ಮತ್ತು ಭಾರತ ದೇಶವು ಶತಮಾನದ ಸಂತನನ್ನು ಕಳೆದುಕೊಂಡು ದುಃಖದ ಮಡುವಿನಲ್ಲಿದೆ.

ಇದನ್ನೂ ಓದಿ :ಜನಸೇವೆಯೇ ಜನಾರ್ದನ ಸೇವೆ : ಅಭಿನವ ಗವಿಶ್ರೀ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.