ಕುಷ್ಟಗಿ (ಕೊಪ್ಪಳ): ಕುಷ್ಟಗಿ ತಾಲೂಕು ರ‍್ಯಾವಣಕಿಯಲ್ಲಿ ತಿಂಗಳಿನಿಂದ ಗ್ರಾಮಸ್ಥರಿಗೆ ಚಿಕೂನ್ ಗುನ್ಯ ಲಕ್ಷಣಗಳಾದ ಜ್ವರ, ಮೈ ಕೈ ನೋವು ಕಾಣಿಸಿಕೊಂಡಿದೆ. ಇಂತಹ ಆತಂಕದ ಪರಿಸ್ಥಿತಿಯಲ್ಲೂ ಈ ಗ್ರಾಮ ಫೆ.20 ಕೊಪ್ಪಳ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯಕ್ಕೆ ಸಜ್ಜಾಗಿದೆ.
ನೂರಕ್ಕೂ ಅಧಿಕ ಜನರು ಚಳಿಜ್ವರ, ಮೈ- ಕೈ ನೋವಿನಿಂದ ಬಳಲುತ್ತಿದ್ದು, ಆರೋಗ್ಯ ಇಲಾಖೆ ಅಗತ್ಯ ಕ್ರಮ ಕೈಗೊಂಡರೂ ಜ್ವರ ನಿಯಂತ್ರಣಕ್ಕೆ ಬಂದಿಲ್ಲ. ಈ ನಡುವೆಯೂ ಗ್ರಾಮದಲ್ಲಿ ಸ್ವಚ್ಛತೆ ಕಾರ್ಯ ಭರದಿಂದ ಸಾಗಿದೆ. ರಸ್ತೆಯ ಅಕ್ಕ ಪಕ್ಕದಲ್ಲಿ ಬಿದ್ದಿದ್ದ ತ್ಯಾಜ್ಯ, ತಿಪ್ಪೆ ಗುಂಡಿ ತೆರವುಗೊಂಡಿವೆ ಹೂಳು ತುಂಬಿದ್ದ ಚರಂಡಿಗಳನ್ನು ಜೆಸಿಬಿ ಯಂತ್ರದಿಂದ ಸ್ವಚ್ಛಗೊಳಿಸುವ ಕಾರ್ಯ ಭರದಿಂದ ಸಾಗಿವೆ.
ಈ ಹಿನ್ನೆಲೆ ತಾಲೂಕು ಆಡಳಿತ ರ‍್ಯಾವಣಕಿ ಗ್ರಾಮದಲ್ಲಿ ಮೊಕ್ಕಾಂ ಮಾಡಿದ್ದು, ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಾಳ್ಕರ್ ಫೆ.20 ರಂದು ಆಗಮಿಸಿ ಅಧಿಕಾರಿಗಳ ಸಮಕ್ಷದಲ್ಲಿ ಗ್ರಾಮದ ಕುಂದು ಕೊರತೆ ಆಲಿಸಿ ಅಲ್ಲಿಯೇ ಪರಿಹಾರ ಕಂಡುಕೊಳ್ಳುವರು.
ಇದನ್ನೂ ಓದಿ:ಲೈಸೆನ್ಸ್ ಬಂದೂಕು, ಒಡವೆ, ನಗದು ಸೇರಿದಂತೆ ಟಿಕ್ ಟಾಕ್ ಸ್ಟಾರ್ ಮನೆಯಲ್ಲಿ ಭಾರಿ ಕಳ್ಳತನ!