ಗಂಗಾವತಿ: ಲಾಕ್ಡೌನ್ನಿಂದ ಬಹುತೇಕ ಆರ್ಥಿಕ ವಹಿವಾಟುಗಳು ಕುಸಿತ ಕಂಡಿದ್ದರೆ, ತಾಲೂಕಿನ ಚಿಕ್ಕರಾಂಪೂರದ ಬಳಿ ಇರುವ ಅಂಜನಾದ್ರಿ ದೇಗುಲದ ಹನುಮನ ಆದಾಯ ಮಾತ್ರ 6.37 ಲಕ್ಷ ಮೀರುವ ಮೂಲಕ ಗಮನ ಸೆಳೆದಿದೆ.
ಲಾಕ್ಡೌನ್ ಪರಿಣಾಮದಿಂದಾಗಿ ದೇಗುಲದಲ್ಲಿನ ಹುಂಡಿಯಲ್ಲಿನ ಹಣ ಹಾಳಾಗುವ ದೃಷ್ಟಿಯಿಂದ ತಹಶೀಲ್ದಾರ್ ಯು. ನಾಗರಾಜ್ ನೇತೃತ್ವದಲ್ಲಿ ಎಣಿಕೆ ಮಾಡಲಾಯಿತು. 6.37 ಲಕ್ಷ ಮೊತ್ತದ ನಗದು ಹಣ ದೇಣಿಗೆ, ಕಾಣಿಕೆ ರೂಪದಲ್ಲಿ ಬಂದಿದೆ.
ಈ ಪೈಕಿ ನೇಪಾಳದ ಎರಡು ನಾಣ್ಯಗಳು ಸಿಕ್ಕಿವೆ. ಕಳೆದ ಎಪ್ರಿಲ್ 21ರಿಂದ ಲಾಕ್ಡೌನ್ ಪರಿಣಾಮದಿಂದಾಗಿ ದೇಗುಲವನ್ನು ಸಾರ್ವಜನಿಕವಾಗಿ ಬಂದ್ ಮಾಡಲಾಗಿದೆ. ಇದಕ್ಕೂ ಮೊದಲು ಅಂದರೆ, ಮಾರ್ಚ್ 18ರಂದು ಹುಂಡಿ ಎಣಿಕೆ ಮಾಡಿದಾಗ 15.42 ಲಕ್ಷ ಮೊತ್ತದ ಹಣ ಸಂಗ್ರಹವಾಗಿತ್ತು. ಈ ಪೈಕಿ ನೇಪಾಳದ ಎರಡು ನಾಣ್ಯಗಳು ಸಿಕ್ಕಿವೆ.
ಕಳೆದ ಎಪ್ರಿಲ್ 21ರಿಂದ ಲಾಕ್ಡೌನ್ ಪರಿಣಾಮದಿಂದಾಗಿ ದೇಗುಲವನ್ನು ಸಾರ್ವಜನಿಕವಾಗಿ ಬಂದ್ ಮಾಡಲಾಗಿದೆ. ಇದಕ್ಕೂ ಮೊದಲು ಅಂದರೆ ಮಾರ್ಚ್ 18ರಂದು ಹುಂಡಿ ಎಣಿಕೆ ಮಾಡಿದಾಗ 15.42 ಲಕ್ಷ ಮೊತ್ತದ ಹಣ ಸಂಗ್ರಹವಾಗಿತ್ತು.