ETV Bharat / state

ರಸ್ತೆ ಅಪಘಾತ: ಓರ್ವ ಸಾವು, ಇಬ್ಬರಿಗೆ ಗಾಯ

ವಿದ್ಯಾನಗರದ ತನ್ನ ಮನೆಯಿಂದ ಹೊಸಕೇರಿ ಗ್ರಾಮದಲ್ಲಿರುವ ಸ್ನೇಹಿತರನ್ನು ಮಾತನಾಡಿಸಿಕೊಂಡು ಬರುತ್ತೇನೆ ಎಂದು ಹೇಳಿ ಹೋಗಿದ್ದ ವ್ಯಕ್ತಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ.

road accident in Gangavthi
ರಸ್ತೆ ಅಪಘಾತ
author img

By

Published : May 1, 2021, 12:32 PM IST

ಗಂಗಾವತಿ: ಸ್ನೇಹಿತರನ್ನು ಮಾತನಾಡಿಸಿಕೊಂಡು ಬರುತ್ತೇನೆ ಎಂದು ಮನೆಯಿಂದ ಹೋದ ವ್ಯಕ್ತಿ ಶವವಾಗಿ ಮರಳಿ ಬಂದ ಘಟನೆ ತಾಲೂಕಿನ ವಿದ್ಯಾನಗರದಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ಧೋಬಿ ಕೆಲಸಗಾರ ರಾಘವೇಂದ್ರರರಾವ್ ವೆಂಕಟೇಶ್ವರ ರಾವ್ ಮಾಮಡಿ ಎಂದು ಗುರುತಿಸಲಾಗಿದೆ. ವಿದ್ಯಾನಗರದ ತನ್ನ ಮನೆಯಿಂದ ಹೊಸಕೇರಿ ಗ್ರಾಮದಲ್ಲಿರುವ ಸ್ನೇಹಿತರನ್ನು ಮಾತನಾಡಿಸಿಕೊಂಡು ಬರುತ್ತೇನೆ ಎಂದು ಹೇಳಿ ಹೋಗಿದ್ದ. ಆದರೆ ಹೊಸಕೇರಿ-ಜಂಗಮರ ಕಲ್ಗುಡಿ ಗ್ರಾಮದ ಬಳಿ ಅಪಘಾತವಾಗಿ ಸ್ಥಳದಲ್ಲಿಯೇ ಪುತ್ರ ಸಾವನ್ನಪ್ಪಿದ್ದಾನೆ ಎಂದು ಮೃತನ ತಂದೆ ರಾಘವೇಂದ್ರರಾವ್ ಗ್ರಾಮೀಣ ಪೊಲೀಸರಿಗೆ ದೂರು ನೀಡಿದ್ದಾರೆ.

ಬೈಕ್​ನಲ್ಲಿ ಹೋದ ರಾಘವೇಂದ್ರ ರಾವ್, ಹೊಸಕೇರಿಯಿಂದ ಬರುವ ತನ್ನ ಇನ್ನಿಬ್ಬರು ಸ್ನೇಹಿತರಾದ ಲಕ್ಷ್ಮಣ ವೆಂಕಟೇಶ ಕಲ್ಗುಡಿ ಹಾಗೂ ದುರ್ಗಾರಾವ್​ ಸತ್ಯನಾರಾಯಣ ವಿದ್ಯಾನಗರ ಎಂಬುವವರನ್ನು ಒಂದೇ ಬೈಕ್​​ನಲ್ಲಿ ಕರೆದುಕೊಂಡು ಬಂದಿದ್ದಾರೆ. ಬರುವ ಸಂದರ್ಭದಲ್ಲಿ ಅತಿ ವೇಗವಾಗಿ ವಾಹನ ಚಾಲನೆ ಮಾಡಿದ್ದರಿಂದ ವಾಹನ ಜಾರಿ (ಸ್ಕಿಡ್) ರಾಘವೇಂದ್ರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ. ಇನ್ನುಳಿದ ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಓದಿ : ದೊಡ್ದ ಪ್ರಮಾಣದಲ್ಲಿ ಲಸಿಕೆ ಲಭ್ಯವಿಲ್ಲ .. ಅಭಿಯಾನಕ್ಕೆ ಸಾಂಕೇತಿಕ ಚಾಲನೆ : ಸಚಿವ ಸುಧಾಕರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.