ಕುಷ್ಟಗಿ(ಕೊಪ್ಪಳ): ಗ್ರಾಮ ಪಂಚಾಯತಿ ಚುನಾವಣಾ ಸಮರದಲ್ಲಿ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದ ಇಬ್ಬರು ಅಭ್ಯರ್ಥಿಗಳು ಚುನಾಯಿತರಾಗಿದ್ದಾರೆ.
ಆರೋಗ್ಯ ಇಲಾಖೆಯ ನಿವೃತ್ತ ಎಫ್ಡಿಸಿ ಸೋಮಪ್ಪ ಕಲ್ಲಡೋಣಿ ಅವರು ಕುಷ್ಟಗಿ ತಾಲೂಕಿನ ಚಳಗೇರಾ ಗ್ರಾಮ ಪಂಚಾಯತಿಯಿಂದ ಸ್ಪರ್ಧಿಸಿದ್ದರು.
ಕುಷ್ಟಗಿ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಹೊರಗುತ್ತಿಗೆಯಲ್ಲಿ ಸೇವೆ ಸಲ್ಲಿಸಿದ್ದ ರಾಯಪ್ಪ ಪೂಜಾರಿ ಎಂಬವರು ತಳವಗೇರಾ ಗ್ರಾ.ಪಂ. ನಿಡಶೇಷಿಯಿಂದ ಸ್ಪರ್ಧಿಸಿದ್ದರು. ಈ ಇಬ್ಬರು ಸಹ ವಿಜಯ ಸಾಧಿಸಿದ್ದಾರೆ.