ಗಂಗಾವತಿ (ಕೊಪ್ಪಳ): ತಾಲೂಕಿನ ಆನೆಗೊಂದಿ ಸಮೀಪವಿರುವ ನವವೃಂದಾವನ ಗಡ್ಡೆಯಲ್ಲಿರುವ ಮಾಧ್ವ ಮತ ಪಂಥದ ಯತಿಗಳ ಬೃಂದಾವನ ಸ್ಥಳದಲ್ಲಿ ರಾಮನವಮಿ ಅಂಗವಾಗಿ, ಸಾವಿರಾರು ಭಕ್ತರು ರಾಮನಾಮ ಜಪ ಮಾಡಿದರು. ತುಂಗಭದ್ರಾ ನದಿ ತೀರದಲ್ಲಿರುವ ಈ ವೃಂದಾವನ ಬೆಟ್ಟಗುಡ್ಡಗಳಿಂದ ಆವೃತವಾಗಿದೆ. ರಾಮನವಮಿ ಅಂಗವಾಗಿ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮೀಜಿಗಳ ಮಠದ ಪೀಠಾಧಿಪತಿ ಸುಭುದೇಂದ್ರರ ನೇತೃತ್ವದಲ್ಲಿ ಮೂಲರಾಮ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಕವೀಂದ್ರ ತೀರ್ಥರ ಮಧ್ಯಾಧನೆ ಅಂಗವಾಗಿ ನಡೆದ ಆರಾಧನಾ ಮಹೋತ್ಸವದಲ್ಲಿ ಶ್ರೀರಾಮನವಮಿಯನ್ನೂ ಆಚರಿಸಲಾಯಿತು. ಸಹಸ್ರಾರು ಭಕ್ತರು ರಾಮನಾಮ ಜಪ ಮಾಡುತ್ತಿರುವುದು ಬೆಟ್ಟಗುಡ್ಡಗಳಲ್ಲಿ ಮಾರ್ದನಿಸಿದಂತೆ ಕೇಳಿಸುತ್ತಿತ್ತು. ಚಿಕ್ಕರಾಂಪೂರದ ಬಳಿ ಇರಿವ ಅಂಜನಾದ್ರಿ ದೇಗುಲದಲ್ಲೂ ರಾಮನವಮಿ ಅಂಗವಾಗಿ ಹನುಮನಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಅಲ್ಲದೇ ವಿಶೇಷ ಪೂಜೆ ನೆರವೇರಿಸಲಾಯಿತು.
ಇದನ್ನೂ ಓದಿ: ರಾಮಾಯಣದಲ್ಲಿ ನೀತಿಪಾಠವಲ್ಲದೇ ಆರ್ಥಿಕ ಲಾಭದ ಅಂಶಗಳಿವೆ, ಏನವು?