ಗಂಗಾವತಿ: ಮುಂದಿನ ಐದು ದಿನಗಳ ಕಾಲ ಕಾರಟಗಿ ಹಾಗೂ ಕನಕಗಿರಿ ಸೇರಿದಂತೆ ಸಮಗ್ರ ತಾಲೂಕಿನಲ್ಲಿ ತುಂತುರು ಮಳೆ ಬೀಳುವ ಸಂಭವವಿದೆ ಎಂದು ಇಲ್ಲಿನ ಕೃಷಿ ವಿಜ್ಞಾನ ಮತ್ತು ಸಂಶಧೋನಾ ಕೇಂದ್ರ ಹವಾಮಾನ ಮೂನ್ಸೂಚನೆ ನೀಡಿದೆ.
ಗರಿಷ್ಟ ಉಷ್ಣಾಂಶ 33ರಿಂದ 40 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಟ 23ರಿಂದ 26 ಡಿಗ್ರಿ ಸೆಲ್ಸಿಯಸ್ ಇರಲಿದೆ. ಆದ್ರತೆ ಪ್ರಮಾಣ ಶೇ. 63 ರಂದ 79ರಷ್ಟು ಇರಲಿದೆ. ಈ ತುಂತುರು ಮಳೆ ಅವಧಿಯಲ್ಲಿ ಗಾಳಿ ಗಂಟೆಗೆ 5ರಿಂದ 12 ಕಿ.ಮೀ ವೇಗದಲ್ಲಿ ಬೀಸಲಿದೆ.
ಮೇ.30 ರಿಂದ ಜೂ. 3 ರವರೆಗೆ ಅಂದರೆ ಈ ಐದು ದಿನಗಳ ಕಾಲ ತಾಲೂಕಿನಲ್ಲಿ ಒಟ್ಟು 238 ಮಿಲಿ ಮೀಟರ್ ಮಳೆಯಾಗುವ ಸಂಭವವಿದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಭಾರತೀಯ ಹವಾಮಾನ ವಿಶ್ಲೇಷಣಾ ಘಟಕ ತಿಳಿಸಿದೆ.