ಗಂಗಾವತಿ: ಕೊಪ್ಪಳ ಜಿಲ್ಲೆಯಲ್ಲಿ ಮುಂದಿನ ಐದು ದಿನಗಳ ಕಾಲ ಮೋಡಕವಿದ ವಾತಾವರಣ ಇರಲಿದ್ದು, ತುಂತುರು ಇಲ್ಲವೇ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಕೃಷಿ ಸಂಶೋಧನಾ ಹಾಗೂ ವಿಜ್ಞಾನ ಕೇಂದ್ರ ತಿಳಿಸಿದೆ.
ಏ.24ರಂದು ಕುಷ್ಟಗಿ ತಾಲೂಕಿನಲ್ಲಿ 7 ಮಿ.ಮೀ, ಭಾನುವಾರ ಏ.25 ಯಲಬುರ್ಗಾ ತಾಲೂಕಿನಲ್ಲಿ 2 ಮಿ.ಮೀ ಹಾಗೂ ಸೋಮವಾರ ಏ.26ರಂದು ಕುಷ್ಟಗಿ ತಾಲೂಕಿನಲ್ಲಿ 3 ಮಿ.ಮೀ ಮಳೆಯಾಗುವ ಸಾಧ್ಯತೆ ಇದೆ.
ಏ.27 ಮಂಗಳವಾರ ಗಂಗಾವತಿ 1.1, ಕೊಪ್ಪಳ 4.0, ಕುಷ್ಟಗಿ 2.4, ಯಲಬುರ್ಗಾ 3.8 ಹಾಗೂ ಏ.28 ಬುಧವಾರ ಗಂಗಾವತಿಯಲ್ಲಿ 3.6, ಕೊಪ್ಪಳದಲ್ಲಿ 6.5, ಕುಷ್ಟಗಿಯಲ್ಲಿ 21.2 ಮತ್ತು ಯಲಬುರ್ಗಾ ತಾಲೂಕಿನಲ್ಲಿ 4.4 ಮಿ.ಮೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಓದಿ : ಬೆಂಗಳೂರಲ್ಲಿ ತಡರಾತ್ರಿ ವರುಣನ ಆರ್ಭಟ; ಕೆಲವೆಡೆ ರಸ್ತೆಗಳು ಸಂಪೂರ್ಣ ಜಲಾವೃತ!