ETV Bharat / state

ಕೊಪ್ಪಳ ಜಿಲ್ಲೆಗೂ ಭೇಟಿ ನೀಡಿದ್ದ ಅಪ್ಪು: ಸರ್ಕಾರಿ ಶಾಲೆಗೆ 1ಲಕ್ಷ ರೂ. ದೇಣಿಗೆ ನೀಡಿದ್ದ ಪವರ್​​ ಸ್ಟಾರ್​​

author img

By

Published : Oct 29, 2021, 7:19 PM IST

ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗಾಗಿ ಗಂಗಾವತಿ ತಾಲೂಕಿನ ಮಲ್ಲಾಪೂರ ಗ್ರಾಮದಲ್ಲಿನ ಸರ್ಕಾರಿ ಪ್ರೌಢ ಶಾಲೆಗೆ ಪವರ್​​ ಸ್ಟಾರ್​​ ಪುನೀತ್​ ರಾಜ್​​ಕುಮಾರ್​​ 1.ಲಕ್ಷ ರೂ. ದೇಣಿಗೆ ನೀಡಿದ್ದರು.

koppal
ಕೊಪ್ಪಳ ಸರ್ಕಾರಿ ಶಾಲೆಗೆ 1ಲಕ್ಷ ರೂ. ದೇಣಿಗೆ ನೀಡಿದ್ದ ಪವರ್​​ ಸ್ಟಾರ್​​

ಕೊಪ್ಪಳ: ಕನ್ನಡದ ಖ್ಯಾತ ನಟ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಿಧನದಿಂದ ಅಭಿಮಾನಿಗಳಲ್ಲಿ ಶೋಕ ಮಡುಗಟ್ಟಿದೆ. ಅಪ್ಪು ಕೊಪ್ಪಳ ಜಿಲ್ಲೆಗೂ ಭೇಟಿ ನೀಡಿದ್ದರು. ಇಲ್ಲಿ ಸಾಮಾಜಿಕ ಕಾರ್ಯಗಳಿಗೆ ಕೈ ಜೋಡಿಸಿದ್ದರು‌. ಆದರೆ, ಎಲ್ಲವೂ ಈಗ ನೆನಪು ಮಾತ್ರ.

ಕೊಪ್ಪಳ ಜಿಲ್ಲೆಗೂ ಭೇಟಿ ನೀಡಿದ್ದ ಅಪ್ಪು..

ಹೌದು, ಪವರ್ ಸ್ಟಾರ್ ಪುನೀತ್​​ ರಾಜ್​​ಕುಮಾರ್​​ ಕಳೆದ ಒಂದು ತಿಂಗಳ ಹಿಂದೆಯಷ್ಟೇ ಕೊಪ್ಪಳ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅವರು ವಿದೇಶಿ ಮ್ಯೂಸಿಕ್ ಕೇಳಿ ಖುಷಿಪಟ್ಟಿದ್ದರು. ಅಲ್ಲದೇ ಕುರಿಗಾಯಿ ಜತೆ ಕುಳಿತು ತಾವೆಷ್ಟು ಸಿಂಪಲ್ ಎಂದು ಪುನೀತ್ ತೋರಿಸಿಕೊಟ್ಟಿದ್ದರು.‌

ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗಾಗಿ ಗಂಗಾವತಿ ತಾಲೂಕಿನ ಮಲ್ಲಾಪೂರ ಗ್ರಾಮದಲ್ಲಿನ ಸರ್ಕಾರಿ ಪ್ರೌಢ ಶಾಲೆಗೆ ಅಪ್ಪು 1. ಲಕ್ಷ ರೂ. ದೇಣಿಗೆ ನೀಡಿದ್ದರು. ಜತೆಗೆ ಪುನೀತ್ ರಾಜ್​​ಕುಮಾರ್ ಅವರು ತಮ್ಮ ಆಟೋಗ್ರಾಫ್ ಹಾಕಿ ಅಭಿನಂದನಾ ಪತ್ರ ನೀಡಿದ್ದರು. ಅಲ್ಲದೇ ಚಿತ್ರೀಕರಣಕ್ಕೆ ಗಂಗಾವತಿ ಭಾಗಕ್ಕೆ ಬಂದಿದ್ದಾಗ ಗಂಗಾವತಿ ಗ್ರಾಮೀಣ ಠಾಣೆ ಪೊಲೀಸರೊಂದಿಗೆ ಕೋವಿಡ್ ಜಾಗೃತಿ ಮೂಡಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.