ETV Bharat / state

ಕೊಪ್ಪಳ : ಮದ್ಯದಂಗಡಿ ಆರಂಭಿಸಲು ಒತ್ತಾಯಿಸಿ ಡಿಸಿ ಕಚೇರಿ ಮುಂದೆ ಪ್ರತಿಭಟನೆ

ಗ್ರಾಮದಲ್ಲಿ ಮದ್ಯದಂಗಡಿಗೆ ಅನುಮತಿ ನೀಡುವಂತೆ ಒತ್ತಾಯಿಸಿ ಮದ್ಯಪ್ರಿಯರು ಕೊಪ್ಪಳದ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದ್ದಾರೆ.

protest-in-front-of-dc-office-demanding-opening-of-liquor-shop-in-koppal
ಮದ್ಯದಂಗಡಿ ಆರಂಭಿಸಲು ಒತ್ತಾಯಿಸಿ ಡಿಸಿ ಕಚೇರಿ ಮುಂದೆ ಪ್ರತಿಭಟನೆ
author img

By ETV Bharat Karnataka Team

Published : Sep 19, 2023, 6:14 PM IST

ಕೊಪ್ಪಳ : ಮದ್ಯದಂಗಡಿ ಆರಂಭಿಸಲು ಒತ್ತಾಯಿಸಿ ಡಿಸಿ ಕಚೇರಿ ಮುಂದೆ ಪ್ರತಿಭಟನೆ

ಕೊಪ್ಪಳ: ನಮ್ಮ ಊರಲ್ಲಿ ಮದ್ಯದಂಗಡಿ ಇರೋದರಿಂದ ಗ್ರಾಮದ ಪುರುಷರು ಹಾಳಾಗ್ತಿದಾರೆ, ಮದ್ಯದಂಗಡಿ ಬಂದ್​ ಮಾಡಿ ಅಂತಾ ಮಹಿಳೆಯರು ಸೇರಿದಂತೆ ಜನರು ಪ್ರತಿಭಟನೆ ಮಾಡಿರುವ ಘಟನೆಗಳನ್ನು ನೋಡದ್ದೇವೆ. ಆದ್ರೆ ಮದ್ಯದಂಗಡಿ ತೆರೆಯುವಂತೆ ಒತ್ತಾಯಿಸಿ ಮದ್ಯಪ್ರಿಯರು ನಗರದ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿರುವ ವಿಚಿತ್ರ ಘಟನೆ ಇಂದು ಕೊಪ್ಪಳದಲ್ಲಿ ನಡೆದಿದೆ. ಜಿಲ್ಲೆಯ ಕುಕನೂರು ತಾಲೂಕಿ‌ನ ಕುದರಿಮೋತಿ ಗ್ರಾಮದಲ್ಲಿ ಮದ್ಯದಂಗಡಿ ತೆರೆಯುವಂತೆ ಮದ್ಯಪ್ರಿಯರು ಧರಣಿ ನಡೆಸಿದ್ದಾರೆ. ಈ ಸಂಬಂಧ ಉಪವಿಭಾಗಾಧಿಕಾರಿ ಮಹೇಶ್​ ಮಾಲಗಿತ್ತಿ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಈ ಹಿಂದೆ ಕುದರಿಮೋತಿ ಗ್ರಾಮದಲ್ಲಿ ಆರಂಭವಾಗುತ್ತಿದ್ದ ಶ್ರೀ ಲಿಕ್ಕರ್ಸ್ ಎನ್ನುವ ಮದ್ಯದಂಗಡಿಗೆ ಗ್ರಾಮದ ಹಲವರು ವಿರೋಧ ವ್ಯಕ್ತಪಡಿಸಿದ್ದರು. ಈ ಸಂಬಂಧ ಕೆಲ ಮದ್ಯಪ್ರಿಯರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಬಾರ್​ ತೆರೆಯಲು ಅನುಮತಿ ನೀಡುವಂತೆ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ಮಾಡಿದರು. ಈ ವೇಳೆ ಘೋಷಣೆ ಕೂಗಿ ತಮ್ಮ ಆಕ್ರೋಶವನ್ನು ಹೊರಹಾಕಿದರು. ಈ ಕೂಡಲೇ ಗ್ರಾಮದಲ್ಲಿ ಬಾರ್​ ತೆರಯಲು ಅನುಮತಿ ನೀಡಬೇಕೆಂದು ಅಧಿಕಾರಿಗಳಿಗೆ ಆಗ್ರಹಿಸಿದರು. ಹಲವು ಮಂದಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

ಈ ವೇಳೆ ಮಾತನಾಡಿದ ಗ್ರಾಮಸ್ಥ ಭೀಮಪ್ಪ, ನಾವು ಮದ್ಯ ಖರೀದಿ ಮಾಡಲು ಬೇರೆಡೆ ಹೋಗಬೇಕಾದ ಪರಿಸ್ಥಿತಿ ಇದೆ. ನಾವು ಬೇರೆ ಕಡೆಯಿಂದ ದುಬಾರಿ ಹಣಕ್ಕೆ ಮದ್ಯ ಖರೀದಿ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಬೇರೆಡೆ ತೆರಳಿ ಮದ್ಯ ಖರೀದಿ ಮಾಡಬೇಕಾದ ಸ್ಥಿತಿ ಇರುವುದರಿಂದ ಹಣ, ಸಮಯ ಎರಡೂ ವ್ಯರ್ಥವಾಗುತ್ತಿದೆ. ಹಾಗಾಗಿ ಗ್ರಾಮದಲ್ಲಿಯೇ ಮದ್ಯದ ಅಂಗಡಿ ಆರಂಭಿಸಬೇಕು. ಈ ಮೂಲಕ ನಮ್ಮ ಮನವಿಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಉಪವಿಭಾಗಾಧಿಕಾರಿ ಮಹೇಶ್​ ಮಾಲಗಿತ್ತಿ ಅವರು, ಕುದುರಿಮೋತಿ ಗ್ರಾಮದಲ್ಲಿ ಮದ್ಯದಂಗಡಿ ತೆರೆಯುವಂತೆ ಒತ್ತಾಯಿಸಿ ಕೆಲವರು ಇಲ್ಲಿಗೆ ಆಗಮಿಸಿದ್ದಾರೆ. ಅಲ್ಲದೆ ಗ್ರಾಮದಲ್ಲಿ ಮದ್ಯದಂಗಡಿ ತೆರೆಯುವಂತೆ ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ. ಅಬಕಾರಿ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುತ್ತೇವೆ ಎಂದು ಹೇಳಿದರು.

ಬಾರ್ ಬೇಡ ಎಂದು ಗ್ರಾಮಸ್ಥರ ಪತ್ರ : ಕುಕನೂರು ತಾಲೂಕಿನ ಕುದರಿಮೋತಿ ಗ್ರಾಮದಲ್ಲಿ ಮದ್ಯದಂಗಡಿ ತೆರೆಯಲು ಮುಂದಾಗಿದ್ದ ಹಿನ್ನಲೆ ಗ್ರಾಮಸ್ಥರು ಬಾರ್​ಗೆ ಪರವಾನಗಿ ನೀಡಬಾರದೆಂದು ಮನವಿ ಮಾಡಿದ್ದಾರೆ. ಈ ಸಂಬಂಧ ಗ್ರಾಮದಲ್ಲಿ ಮದ್ಯದಂಗಡಿ ತಡೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕೊಪ್ಪಳ ಅಬಕಾರಿ ಇಲಾಖೆ ಉಪ ಆಯುಕ್ತರಿಗೆ ಬಸವರಾಜ ರಾಯರೆಡ್ಡಿ ಎಂಬವರು ಪತ್ರ ಬರೆದಿದ್ದಾರೆ.

ಇದನ್ನೂ ಓದಿ : ವಿದೇಶದಲ್ಲಿರುವ ಪತಿಯಿಂದ ಪತ್ನಿಗೆ ವಾಟ್ಸಾಪ್ ಮೂಲಕ ತ್ರಿವಳಿ ತಲಾಖ್​.. ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.