ETV Bharat / state

ನವನಗರಿಗರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ

ಕೊಪ್ಪಳ ಪಟ್ಟಣದ ನವನಗರ ನಿವಾಸಿಗಳಿಗೆ ಮೂಲ ಸೌಕರ್ಯಗಳನ್ನು ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನಾ ಮೆರವಣಿಗೆ ನಡೆಸಲಾಗಿದೆ.

ಬೇಡಿಕೆ ಈಡೇರಿಸುವಂತೆ ನವನಗರ ಜನರ ಪ್ರತಿಭಟನೆ
author img

By

Published : Oct 15, 2019, 3:48 PM IST

Updated : Oct 15, 2019, 4:59 PM IST

ಕೊಪ್ಪಳ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕೊಪ್ಪಳದ ಭಾಗ್ಯನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ನವನಗರ ನಿವಾಸಿಗಳು ಪ್ರತಿಭಟಿಸಿದ್ರು.

ನವನಗರದಿಂದ ಭಾಗ್ಯನಗರ ಪಟ್ಟಣ ಪಂಚಾಯ್ತಿ ಕಚೇರಿವರೆಗೂ ಮೆರವಣಿಗೆ ಮೂಲಕ ಆಗಮಿಸಿದ‌ ಪ್ರತಿಭಟನಾಕಾರರು ಪಟ್ಟಣ ಪಂಚಾಯ್ತಿ ಮುಂದಿನ ಮುಖ್ಯರಸ್ತೆ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

ನವನಗರ, ಭಾಗ್ಯನಗರದಿಂದ ಸುಮಾರು 2 ಕಿಲೋ‌ಮೀಟರ್ ದೂರದಲ್ಲಿದೆ. ಇಲ್ಲಿ ಸರಿಯಾದ ರಸ್ತೆ ಇಲ್ಲದ ಕಾರಣದಿಂದ ಬಸ್ ಸೌಲಭ್ಯವೂ ಇಲ್ಲ. ಈ ಮೂಲಕ ಪಟ್ಟಣ ಪಂಚಾಯ್ತಿ ಮಲತಾಯಿ ಧೋರಣೆ ಅನುಸರಿಸುತ್ತಿದೆ‌ ಎಂದು ಆಕ್ರೋಶ ಹೊರಹಾಕಿದರು.

ಬೇಡಿಕೆ ಈಡೇರಿಸುವಂತೆ ನವನಗರ ಜನರ ಪ್ರತಿಭಟನೆ

ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಂತೆ ಈಗಾಗಲೇ ಶಾಸಕರು, ಸಂಸದರನ್ನು ಭೇಟಿಯಾಗಿ ಮನವಿ ಮಾಡಲಾಗಿದೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ರಸ್ತೆ ನಿರ್ಮಾಣ, ವಿದ್ಯುತ್ ದೀಪಗಳ ಸೌಲಭ್ಯ, ಸ್ವಚ್ಛತೆ, ಕುಡಿಯುವ ನೀರು ಸೌಲಭ್ಯ ಕಲ್ಪಿಸಬೇಕು. ಅಲ್ಲದೆ, ಸುಮಾರು 600 ಮತದಾರರಿದ್ದು ಇಲ್ಲಿಯೇ ಮತಗಟ್ಟೆ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.

Intro:

Body:ಕೊಪ್ಪಳ:- ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕೊಪ್ಪಳದ ಭಾಗ್ಯನಗರ ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ನವನಗರ ನಿವಾಸಿಗಳು ಪ್ರತಿಭಟನೆ‌ ನಡೆಸಿದರು. ನವನಗರದಿಂದ ಭಾಗ್ಯನಗರ ಪಟ್ಟಣ ಪಂಚಾಯ್ತಿ ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ಮೂಲಕ ಆಗಮಿಸಿದ‌ ಪ್ರತಿಭಟನಾಕಾರರು ಪಟ್ಟಣ ಪಂಚಾಯ್ತಿ ಮುಂದಿನ ಮುಖ್ಯರಸ್ತೆ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕ ಜನಪ್ರತಿನಿಧಿಗಳು ಬರಬೇಕು ಎಂದು ಬಿಗಿಪಟ್ಟು ಹಿಡಿದರು. ಭಾಗ್ಯನಗರ ಪಟ್ಟಣ ಪಂಚಾಯ್ತಿ ವ್ಯಾಪ್ತಿಗೆ ಬರುವ ನವನಗರ ಭಾಗ್ಯನಗರದಿಂದ ಸುಮಾರು 2 ಕಿಲೋ‌ಮೀಟರ್ ಇದೆ. ಇಲ್ಲಿ ಸರಿಯಾದ ಸಂಪರ್ಕ ರಸ್ತೆ ಇಲ್ಲದೆ ಇರೋದ್ರಿಂದ ಬಸ್ ಸೌಲಭ್ಯವೂ ಇಲ್ಲ. ಸರಿಯಾದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಲ್ಲ. ಈ ಮೂಲಕ ಪಟ್ಟಣ ಪಂಚಾಯ್ತಿ ಮಲತಾಯಿ ಧೋರಣೆ ಅನುಸರಿಸುತ್ತಿದೆ‌. ಸೌಲಭ್ಯಗಳನ್ನು ಕಲ್ಪಿಸುವಂತೆ ಈಗಾಗಲೇ ಶಾಸಕರು, ಸಂಸದರನ್ನು ಭೇಟಿಯಾಗಿ ಮನವಿ ಮಾಡಲಾಗಿದೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಸ್ತೆ ನಿರ್ಮಾಣ, ವಿದ್ಯುತ್ ದೀಪಗಳ ಸೌಲಭ್ಯ, ಸ್ವಚ್ಛತೆ, ಕುಡಿಯುವ ನೀರು ಸೌಲಭ್ಯ ಕಲ್ಪಿಸಬೇಕು. ಅಲ್ಲದೆ, ಸುಮಾರು 600 ರಷ್ಟು ಮತದಾರರು ಇದ್ದು ಇಲ್ಲಿಯೇ ಮತಗಟ್ಟೆಯನ್ನು ಸ್ಥಾಪಿಸಬೇಕು ಎಂಬುದು ಸೇರಿದಂತೆ ಇನ್ನಿತರೆ ಹಲವು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿದರು. ಬಳಿಕ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಬಾಬು ಅವರಿಗೆ ಮನವಿ ಸಲ್ಲಿಸಿದರು.

ಬೈಟ್1:- ನವನವಗರ ನಿವಾಸಿ.

Conclusion:
Last Updated : Oct 15, 2019, 4:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.