ಗಂಗಾವತಿ: ಗಣೇಶ ಹಬ್ಬದ ಅಂಗವಾಗಿ ನಗರದಲ್ಲಿ ಪೊಲೀಸರು ಇಂದು ಸಂಜೆ ರೂಟ್ ಮಾರ್ಚ್ ಮಾಡುವ ಮೂಲಕ ಜನರಲ್ಲಿ ವಿಶ್ವಾಸ ಮೂಡಿಸಲು ಯತ್ನಿಸಿದರು.
ಪೊಲೀಸ್ ಠಾಣೆಗಳ ಸಮುಚ್ಛಯದಿಂದ ಆರಂಭವಾದ ರೂಟ್ ಮಾರ್ಚ್ ಕೃಷ್ಣದೇವರಾಯ ವೃತ್ತದ ಮೂಲಕ ನಗರದ ಪ್ರಮುಖ ರಸ್ತೆ, ವೃತ್ತಗಳಲ್ಲಿ ಸಂಚರಿಸಿತು. ಡಿವೈಎಸ್ಪಿ ಡಾ. ಚಂದ್ರಶೇಖರ ಹಾಗೂ ನಗರ ಠಾಣೆಯ ವೆಂಕಟಸ್ವಾಮಿ ನೇತೃತ್ವ ವಹಿಸಿದ್ದರು.