ETV Bharat / state

ಕೊರೊನಾ ತೊಲಗಲಿ ಎಂದು ನಿಗಿ ನಿಗಿ ಕೆಂಡದಲಿ ಓಡಿದ ಜನರು - prayer to overcome from corona

ಅಗ್ನಿಕುಂಡ ಮಹೋತ್ಸವದಲ್ಲಿ ನೂರಾರು ಭಕ್ತರು ಕೊರೊನಾ ದೇಶದಿಂದ ತೊಲಗಲಿ ಎಂದು ಪ್ರಾರ್ಥಿಸಿ ಕೆಂಡ ಹಾಯುವ ಮೂಲಕ ವೀರಭದ್ರೇಶ್ವರನಿಗೆ ಹರಕೆ ಹೊತ್ತರು..

people runs in fire pit to get rid covid
ಕೆಂಡ ಹಾಯ್ದ ಜನ
author img

By

Published : Sep 8, 2021, 7:06 PM IST

ಗಂಗಾವತಿ/ಕೊಪ್ಪಳ : ಕಳೆದ ಎರಡು ವರ್ಷದಿಂದ ಬಿಡದೇ ಕಾಡುತ್ತಿರುವ ಕೊರೊನಾ ವೈರಸ್​ ತೊಲಗಲಿ ಎಂದು ಹರಕೆ ಹೊತ್ತು ಜನ ನಿಗಿನಿಗಿ ಕೆಂಡದಲ್ಲಿ ಓಡಿದ ಘಟನೆ ನಗರದಲ್ಲಿ ನಡೆದಿದೆ.

ಕೊರೊನಾ ತೊಲಗಲೆಂದು ಕೆಂಡ ಹಾಯ್ದ ಜನರು..

ನಗರದ ಪುರಾತನ ಕಾಲದ ಕೋಟೆ ಪ್ರದೇಶದ (ಕಿಲ್ಲಾ ಏರಿಯಾ) ಕೋಟೆ ಶ್ರೀ ವೀರಭದ್ರೇಶ್ವರ ದೇವಸ್ಥಾನದ ವಾರ್ಷಿಕೋತ್ಸವದ ಅಂಗವಾಗಿ ದೇಗುಲದ ಪ್ರಾಂಗಣದಲ್ಲಿ ಅಗ್ನಿಕುಂಡ ಮಹೋತ್ಸವ ನಡೆಯಿತು. ಪ್ರತಿ ವರ್ಷ ಅಗ್ನಿಕುಂಡ ಮಹೋತ್ಸವ ನಡೆಯುತ್ತದೆ. ಆದರೆ, ಕಳೆದ ಎರಡು ವರ್ಷದಿಂದ ಅಗ್ನಿಕುಂಡ ಮಹೋತ್ಸವ ಸೇರಿ ಯಾವುದೇ ಧಾರ್ಮಿಕ ಆಚರಣೆಗೆ ಅವಕಾಶವಿರಲಿಲ್ಲ.

ಈ ಬಾರಿ ಅವಕಾಶ ನೀಡಿದ್ದು, ಅಗ್ನಿಕುಂಡ ಮಹೋತ್ಸವದಲ್ಲಿ ನೂರಾರು ಭಕ್ತರು ಕೊರೊನಾ ದೇಶದಿಂದ ತೊಲಗಲಿ ಎಂದು ಪ್ರಾರ್ಥಿಸಿ ಕೆಂಡ ಹಾಯುವ ಮೂಲಕ ವೀರಭದ್ರೇಶ್ವರನಿಗೆ ಹರಕೆ ಹೊತ್ತರು.

ಇದನ್ನೂ ಓದಿ:ದೇಶದಲ್ಲಿ ಕೊಂಚ ಏರಿದ Corona: ಹೊಸದಾಗಿ 37,875 ಕೇಸ್​ ದಾಖಲು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.