ಕೊಪ್ಪಳ: ಲಾಕ್ಡೌನ್ ಕಾರಣ ಬಸ್ ಸಂಚಾರವಿಲ್ಲದೆ ಊರಿಗೆ ಹೋಗಲು ವೃದ್ಧೆಯೋರ್ವರು ಪರದಾಡಬೇಕಾಯಿತು.
ಜಿಲ್ಲೆಯ ಕುಕನೂರು ತಾಲೂಕು ತಳಕಲ್ ಗ್ರಾಮದ ಸಿದ್ದಮ್ಮ ಎಂಬ ವೃದ್ಧೆಯ ಪತಿ ಭೀಮಯ್ಯಗೆ ಕೊರೊನಾ ಸೋಂಕು ತಗುಲಿದೆ. ಹಾಗಾಗಿ ಭೀಮಯ್ಯನನ್ನು ಗವಿಮಠ ವೃದ್ಧಾಶ್ರಮದ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಓದಿ : ಕೊಪ್ಪಳದಲ್ಲಿ 315 ಕೊರೊನಾ ಕೇಸ್ ಪತ್ತೆ: 8 ಜನ ಸಾವು
ಪತಿಯೊಂದಿಗೆ ಬಂದಿದ್ದ ಅಜ್ಜಿಗೆ ಊರಿಗೆ ಹೋಗುವಂತೆ ವೈದ್ಯರು ತಿಳಿಸಿದ್ದರು. ಆದರೆ ವಾಪಸ್ ತಳಕಲ್ಗೆ ಹೋಗಲು ವಾಹನ ವ್ಯವಸ್ಥೆಯಿಲ್ಲದೆ ಅಜ್ಜಿ ಪರದಾಡುವಂತಾಯಿತು.