ETV Bharat / state

ಗಂಗಾವತಿ: ಹಸಿದ ಕೋತಿಗಳ ಹೊಟ್ಟೆ ತುಂಬಿಸಿದ ಅಧಿಕಾರಿಗಳು

ವಿವಿಧ ಧಾರ್ಮಿಕ ತಾಣಗಳಲ್ಲಿ ಆಹಾರವಿಲ್ಲದೆ ಕಂಗಾಲಾಗಿದ್ದ ಕೋತಿಗಳಿಗೆ ಕಂದಾಯ ಇಲಾಖೆ ಅಧಿಕಾರಿಗಳು ಬಾಳೆಗೊನೆ ನೀಡಿದರು.

Officers Feeding Monkeys
ಕೋತಿಗಳ ಹಸಿವಿನ ದಾಹ ಈಡೇರಿಸಿದ ಅಧಿಕಾರಿಗಳು
author img

By

Published : May 13, 2021, 11:07 AM IST

ಗಂಗಾವತಿ: ತಾಲೂಕಿನ ಅಂಜನಾದ್ರಿ, ಪಂಪಾ ಸರೋವರ ಸೇರಿದಂತೆ ನಾನಾ ಧಾರ್ಮಿಕ ತಾಣಗಳಲ್ಲಿ ಆಹಾರವಿಲ್ಲದೆ ಕಂಗಾಲಾಗಿದ್ದ ಕೋತಿಗಳ ನೆರವಿಗೆ ಇದೀಗ ಕಂದಾಯ ಇಲಾಖೆ ಅಧಿಕಾರಿಗಳು ಧಾವಿಸಿದ್ದಾರೆ.

ಕೋತಿಗಳ ಹಸಿವು ನೀಗಿಸಿದ ಅಧಿಕಾರಿಗಳು

ತಹಶೀಲ್ದಾರ್ ಯು.ನಾಗರಾಜ್ ನೇತೃತ್ವದಲ್ಲಿ ಅಂಜನಾದ್ರಿಗೆ ತೆರಳಿದ ಕಂದಾಯ ಇಲಾಖೆ ಅಧಿಕಾರಿಗಳು, ಬಾಳೆಗೊನೆ ನೀಡಿ ಕೋತಿಗಳ ಹಸಿವು ನೀಗಿಸಲು ಯತ್ನಿಸಿದರು. ಲಾಕ್​​ಡೌನ್ ಪರಿಣಾಮ ಎಲ್ಲಾ ಧಾರ್ಮಿಕ ಕ್ಷೇತ್ರಗಳು ಮುಚ್ಚಿದ್ದು, ಭಕ್ತರಿಲ್ಲದೆ ಭಣಗುಡುತ್ತಿವೆ. ದೇವಸ್ಥಾನಕ್ಕೆ ಆಗಮಿಸುತ್ತಿದ್ದ ಭಕ್ತರು ಕೋತಿಗಳಿಗೆ ಹಣ್ಣು-ಕಾಯಿ ನೀಡಿ ಹೊಟ್ಟೆ ತುಂಬಿಸುತ್ತಿದ್ದರು. ಆದರೆ ಕಳೆದ ಒಂದು ತಿಂಗಳಿಗೂ ಹೆಚ್ಚು ಕಾಲದಿಂದ ದೇವಸ್ಥಾನಗಳ ತೆರೆಯದೇ ಇದ್ದರಿಂದ ಕೋತಿಗಳು ಆಹಾರ ಸಿಗದೆ ಪರದಾಡುವಂತಾಗಿತ್ತು.

ಹೀಗಾಗಿ ಸ್ಥಳಕ್ಕೆ ಭೇಟಿ ನೀಡಿದ ಕಂದಾಯ ಇಲಾಖೆ ಅಧಿಕಾರಿಗಳು, ಕೋತಿಗಳಿಗೆ ಆಹಾರ ಹಾಗೂ ನೀರಿನ ವ್ಯವಸ್ಥೆ ಮಾಡುವಂತೆ ಆಯಾ ದೇವಸ್ಥಾನದ ಅರ್ಚಕರಿಗೆ ಸೂಚನೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.