ETV Bharat / state

ರಾಷ್ಟ್ರೀಯ ಲೋಕ ಅದಾಲತ್: 1.87 ರೂ ಕೋಟಿ ಮೊತ್ತದ 187 ವ್ಯಾಜ್ಯ ಪರಿಹಾರ - ಕೊಪ್ಪಳದ ಸತ್ರ ನ್ಯಾಯಾಲಯದಲ್ಲಿ ಲೋಕ ಅದಾಲತ್

ಕೊಪ್ಪಳದ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದಲ್ಲಿ ಇದೇ ಮೊದಲ ಬಾರಿಗೆ ರಾಷ್ಟ್ರೀಯ ಲೋಕ ಅದಾಲತ್ ನಡೆಯಿತು.

national adalath in koppala courts
ರಾಷ್ಟ್ರೀಯ ಲೋಕ ಅದಾಲತ್
author img

By

Published : Feb 8, 2020, 6:52 PM IST

ಕೊಪ್ಪಳ/ಗಂಗಾವತಿ : ಇಲ್ಲಿನ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದಲ್ಲಿ ಇದೇ ಮೊದಲ ಬಾರಿಗೆ ರಾಷ್ಟ್ರೀಯ ಲೋಕ ಅದಾಲತ್ ನಡೆಯಿತು.

ರಾಷ್ಟ್ರೀಯ ಲೋಕ ಅದಾಲತ್

ಇಲ್ಲಿನ ವಿವಿಧ ನಾಲ್ಕು ನ್ಯಾಯಾಲಯಗಳಲ್ಲಿ ಒಟ್ಟು 1.87 ಕೋಟಿ ರೂಪಾಯಿ ಮೌಲ್ಯದ 187 ವ್ಯಾಜ್ಯಗಳು ಪರಿಹಾರವಾಗಿದ್ದು ದಾಖಲೆಯಾಗಿದೆ. ಜಿಲ್ಲಾ ಹೆಚ್ಚುವರಿ ನ್ಯಾಯಾಲಯ, ಹಿರಿಯ ಶ್ರೇಣಿ, ಪ್ರಧಾನ ಸಿವಿಲ್ ಹಾಗೂ ಹೆಚ್ಚುವರಿ ಸಿವಿಲ್ ನ್ಯಾಯಾಲಯದ ಚೆಕ್​​​ ಬೌನ್ಸ್, ಭೂ ವ್ಯಾಜ್ಯ, ಹಣಕಾಸಿನ ಲೇವಾದೇವಿ ಸೇರಿದಂತೆ ನಾನಾ ಪ್ರಕರಣಗಳನ್ನು ನ್ಯಾಯಾಧೀಶರು ವಿಲೇವಾರಿ ಮಾಡಿದರು. ದೂರುದಾರರು ಹಾಗೂ ಕಕ್ಷಿದಾರರ ಮಧ್ಯೆ ಸೌಹಾರ್ದ ರಾಜಿ ಮಾಡಿಸಿದರು.

ನ್ಯಾಯಾಧೀಶರಾದ ರೇಣುಕಾ ಕುಲಕರ್ಣಿ, ಜಿ. ಅನಿತಾ, ಆರ್.ಎಂ. ನದಾಫ್ ಹಾಗೂ ಎಚ್.ಡಿ. ಗಾಯತ್ರಿ ರಾಷ್ಟ್ರೀಯ ಲೋಕ ಅದಾಲತ್​​​ನಲ್ಲಿ ಪಾಲ್ಗೊಂಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.