ಗಂಗಾವತಿ: ತಬ್ಲಿಘಿ ಜಮಾತ್ ಮೂಲಕ ದೇಶದಲ್ಲಿ ವ್ಯಾಪಕ ಪ್ರಮಾಣದಲ್ಲಿ ಕೊರೊನಾ ಹರಡುತ್ತಿದೆ ಎಂದು ದೊಡ್ಡ ಮಟ್ಟದಲ್ಲಿ ಸುದ್ದಿ ಹಬ್ಬಿಸಲಾಗುತ್ತಿದೆ. ಇದು ನಿರಾಧಾರ ಎಂದು ಕಾಂಗ್ರೆಸ್ ನಾಯಕ, ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಹೇಳಿದರು.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಟಿವಿ , ಮುದ್ರಣ ಮಾಧ್ಯಮ ತಮ್ಮ ಬಳಿ ಇದೆ ಎಂದು ಸುಳ್ಳು ಸುದ್ದಿಗಳನ್ನು ಸೃಷ್ಟಿಸುತ್ತಿದ್ದಾರೆ. ದೇಶದಲ್ಲಿ ಶೇ.50ರಷ್ಟು ಮುಸ್ಲಿಮರಿದ್ದಾರೆ. ಇವರಿಗೆ ತೊಂದರೆ ಕೊಟ್ಟರೇ ಅವರು ಸಾಯುವುದಿಲ್ಲ. ಬದಲಾಗಿ ದ್ವೇಷ ಹೆಚ್ಚಾಗುತ್ತದೆ. ಈ ಕೆಲಸವನ್ನು ಯಾರೂ ಮಾಡಬಾರದು. ಇದು ದೊಡ್ಡ ಅಪರಾಧ ಎಂದು ಆರೋಪಿಸಿದರು.
ನಾವು ಶಾಂತಿ ಪ್ರಿಯರು. ಹಿಂದೂ, ಮುಸ್ಲಿಂ, ಕ್ರೈಸ್ತ, ಪಾರ್ಸಿ, ಜೈನ ಹೀಗೆ ಎಲ್ಲಾ ಮತೀಯರು ಸೇರಿದರೆ ಮಾತ್ರ ಭಾರತ ಆಗುತ್ತದೆ. ಯಾವುದೇ ಒಂದು ಕೋಮು ಮಾತ್ರ ದೇಶದ ಸಂಪೂರ್ಣ ಅಧಿಕಾರವನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಅನ್ಸಾರಿ ಹೇಳಿದ್ದಾರೆ.