ಕುಷ್ಟಗಿ(ಕೊಪ್ಪಳ): ಕುಷ್ಟಗಿ ತಾಲೂಕಿನಾದ್ಯಂತ ಮುಸ್ಲಿಂ ಬಾಂಧವರು ಶಾಂತಿ, ಸೌಹಾರ್ದ ಹಾಗೂ ಸಹಬಾಳ್ವೆಯ ಪ್ರತೀಕವಾಗಿರುವ ಈದ್ ಉಲ್ ಫಿತರ್ ಹಬ್ಬವನ್ನು ಮನೆಯಲ್ಲೇ ಆಚರಿಸುವುದರ ಮೂಲಕ ಮಾದರಿಯಾದರು.
![Muslim celebrating ramzan at home](https://etvbharatimages.akamaized.net/etvbharat/prod-images/kn-kst-02-25-ramjan-fesival-kac10028_25052020110931_2505f_1590385171_804.jpg)
ಸರ್ಕಾರದ ಆದೇಶಕ್ಕೆ ಬೆಲೆ ಕೊಟ್ಟು ಮನೆಯಲ್ಲೇ ಹಬ್ಬ ಆಚರಿಸಿದ ಮುಸ್ಲಿಂ ಬಾಂಧವರು, ಕೊರೊನಾ ವೈರಸ್ ನಿಯಂತ್ರಿಸುವ ಹಿನ್ನೆಲೆ ಕೈ ಮಿಲಾಯಿಸುವ, ಆಲಂಗಿಸುವ ಬದಲಿಗೆ ಮೌಖಿಕವಾಗಿ ಶುಭಾಶಯ ವಿನಿಮಯ ಮಾಡಿಕೊಂಡರು. ರಂಜಾನ್ ಮಾಸದಲ್ಲಿ ಕಟ್ಟುನಿಟ್ಟಾಗಿ ಉಪವಾಸ ಆಚರಿಸಿದ್ದ ಮುಸ್ಲಿಂ ಬಾಂಧವರು, ಸೋಮವಾರ ತಮ್ಮ ಮನೆಗಳಲ್ಲಿ ಹಬ್ಬವನ್ನು ಸರಳವಾಗಿ ಆಚರಿಸಿ ಅಲ್ಲಾಹುನಲ್ಲಿ ಕೊರೊನಾ ಸಂಕಷ್ಟ ನಿವಾರಣೆಗೆ ಪ್ರಾರ್ಥಿಸಿದರು.
![Muslim celebrating ramzan at home](https://etvbharatimages.akamaized.net/etvbharat/prod-images/kn-kst-02-25-ramjan-fesival-kac10028_25052020110931_2505f_1590385171_1061.jpg)
ಈ ಬಗ್ಗೆ ಮಾತನಾಡಿದ ಜಾಮೀಯಾ ಮಸೀದಿಯ ಅಧ್ಯಕ್ಷ ಸಯ್ಯದ್ ಮುರ್ತುಜಾ, ಕೊರೊನಾ ವೈರಸ್ ನಿಯಂತ್ರಣದಲ್ಲಿಡಲು ಪ್ರಾರ್ಥನೆ ವೇಳೆ ಸಾಮಾಜಿಕ ಅಂತರ ಕಾಪಾಡಲಾಗಿದೆ. ಕೈ ಕೈ ಮಿಲಾಯಿಸುವುದು, ಆಲಿಂಗನದ ಬದಲಿಗೆ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳಲಾಯಿತು ಎಂದರು.