ಕುಷ್ಟಗಿ(ಕೊಪ್ಪಳ) : ತಾಲೂಕಿನ ಬೊಮ್ಮನಾಳ ಗ್ರಾಮದಲ್ಲಿ ಆಸ್ತಿ ಹಂಚಿಕೆ ವಿಚಾರದಲ್ಲಿ ನಡೆದ ದಾಯಾದಿ ಕಲಹ ಕೊಲೆಯಲ್ಲಿ ಅಂತ್ಯವಾಗಿದೆ.
ಯಮನಪ್ಪ ತಿಪ್ಪಣ್ಣ ಹುಗ್ಗಿ(33) ಎಂಬಾತ ಕೊಲೆಯಾದ ವ್ಯಕ್ತಿ. ಹುಗ್ಗಿ ಸಹೋದರರ ಮಧ್ಯೆ 10 ಎಕರೆ ಜಮೀನು ಸಂಬಂಧ ಸಹೋದರ ಕುಟುಂಬಗಳ ಮದ್ಯೆ ವ್ಯಾಜ್ಯ ಇತ್ತು.
ಈ ಹಿನ್ನೆಲೆ ಯಮನಪ್ಪ ತಿಪ್ಪಣ್ಣ ಹುಗ್ಗಿಯನ್ನು ಕೊಡಲಿಯಿಂದ ಕೊಚ್ಚಿ ಕೊಂದಿದ್ದಾರೆ. ದ್ಯಾವಪ್ಪ ತಿಪ್ಪಣ್ಣ ಹುಗ್ಗಿಯನ್ನು ಎತ್ತಿನ ಬಂಡಿಗೆ ಕಟ್ಟಿ ಹಾಕಿ ಕೆಲವರು ಹಲ್ಲೆ ನಡೆಸಿದ್ದಾರೆ. ತೀವ್ರಗಾಯಗೊಂಡ ದ್ಯಾವಪ್ಪನನ್ನು ಬಾಗಲಕೋಟೆ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ.
ಓದಿ:ಶವಸಂಸ್ಕಾರದ 'ಟೈಮ್' ನಾವೇ ಫಿಕ್ಸ್ ಮಾಡುತ್ತೇವೆ : ಸಚಿವ ಆರ್ ಅಶೋಕ್
ಪ್ರಕರಣ ಸಂಬಂಧ ಹನಮಪ್ಪ ತಿಪ್ಪಣ್ಣ ಹುಗ್ಗಿ, ಹೊಳಿಯಪ್ಪ ತಿಪ್ಪಣ್ಣ ಹುಗ್ಗಿ, ಮಾಳವ್ವ ಹೊಳಿಯಪ್ಪ ಹುಗ್ಗಿ, ಕನಕಪ್ಪ ತಿಪ್ಪಣ್ಣ ಹುಗ್ಗಿ, ದೇವಾನಂದ ಹೊಳಿಯಪ್ಪ ಹುಗ್ಗಿ ವಿರುದ್ಧ ದೂರು ದಾಖಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.