ETV Bharat / state

ಇಂದು ಹಣ, ಜಾತಿಯ ಹೆಸರಿನಲ್ಲಿ ಚುನಾವಣೆ ನಡೆಯುತ್ತಿದೆ: ಸಂಸದ ಸಂಗಣ್ಣ ಕರಡಿ ಬೇಸರ - Muradi Bhimajja

ಕುಷ್ಟಗಿ ಮೇಲ್ಸೇತುವೆಗೆ ಪುಂಡಲೀಕಪ್ಪ ಜ್ಞಾನಮೋಠೆ ಹೆಸರನ್ನು ಇಡುವುದಲ್ಲದೇ ಅವರ ತತ್ವದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಮುಖ್ಯವಾಗುತ್ತದೆ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಹೇಳಿದರು.

bhimajja_muradi_punnya_thithi
ಸ್ವಾತಂತ್ರ್ಯ ಸೇನಾನಿ ಮುರಡಿ ಭೀಮಜ್ಜ 64ನೇ ಪುಣ್ಯ ತಿಥಿ
author img

By

Published : Jul 8, 2020, 8:11 PM IST

ಕುಷ್ಟಗಿ (ಕೊಪ್ಪಳ): ರಾಷ್ಟ್ರೀಯತೆ, ಐಕ್ಯತೆ, ಸಮಾಜ ಸೇವೆ ಹಿನ್ನೆಲೆ ಅಂದಿನ ಚುನಾವಣೆಗಳು ನಡೆದಿದ್ದರೆ, ಇಂದು ಕೇವಲ ಹಣ, ಜಾತಿಯ ಹೆಸರಿನಲ್ಲಿ ನಡೆಯುತ್ತಿವೆ ಎಂದು ಸಂಸದ ಸಂಗಣ್ಣ ಕರಡಿ ಬೇಸರ ವ್ಯಕ್ತಪಡಿಸಿದರು.

ನಗರದಲ್ಲಿ ಸ್ವಾತಂತ್ರ್ಯ ಸೇನಾನಿ ಮುರಡಿ ಭೀಮಜ್ಜರ 64ನೇ ಪುಣ್ಯ ತಿಥಿ ಹಾಗೂ ಸ್ವಾತಂತ್ರ್ಯ ಯೋಧ, ಮಾಜಿ ಶಾಸಕರ 7ನೇ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಿಜಲಿಂಗಪ್ಪ ಸಿಎಂ ಆಗಿದ್ದ ಸಂದರ್ಭದಲ್ಲಿ ಆಡಳಿತ ಪಕ್ಷದಲ್ಲಿ ಗುಂಪುಗಾರಿಕೆ ಎದ್ದಾಗ ಆಗಿನ ಕುಷ್ಟಗಿ ಶಾಸಕ ಪುಂಡಲೀಕಪ್ಪ ಜ್ಞಾನಮೋಠೆ ಅವರು, ಸಿಎಂ ನಿಜಲಿಂಗಪ್ಪ ಅವರಿಗೆ ಗುಂಪುಗಾರಿಕೆ ನಿವಾರಿಸಲು ಆಗಿನ ಕೆಲ ಶಾಸಕರ ಸಹಾಯ ಕೇಳಿ ಸರ್ಕಾರ ಮುನ್ನೆಡೆಸುವಂತೆ ಸಲಹೆ ನೀಡಿದ್ದರು.

ಸ್ವಾತಂತ್ರ್ಯ ಸೇನಾನಿ ಮುರಡಿ ಭೀಮಜ್ಜರ 64ನೇ ಪುಣ್ಯ ತಿಥಿ

ಆಗ ನಿಜಲಿಂಗಪ್ಪ ಅವರು ಸಲಹೆ ತಿರಸ್ಕರಿಸಿ, ಅವರ ಸಹಾಯ ಕೇಳಿದರೆ ಮುಂದೆ ಆಡಳಿತ ನಿರ್ವಹಿಸುವುದು ಕಷ್ಟವಾಗುತ್ತದೆ. ಹುದ್ದೆ ಮುಖ್ಯ ಅಲ್ಲ. ಅವರ ಬೇಕು ಬೇಡಗಳನ್ನು ಪೂರೈಸಬೇಕಾಗುತ್ತದೆ. ಇದು ಪ್ರಜಾಪ್ರಭುತ್ವದ ಲಕ್ಷಣ ಅಲ್ಲ ಎಂದು ಸ್ಪಷ್ಟಪಡಿಸಿರುವುದನ್ನು ಸ್ಮರಿಸಿದರು.

ಕುಷ್ಟಗಿ ಮೇಲ್ಸೇತುವೆಗೆ ಕೇಂದ್ರ ಸಚಿವ ಅನಂತ್ ಕುಮಾರ್​ ಅವರ ಹೆಸರಿಡಬೇಕೆಂದು ಪ್ರಸ್ತಾಪಿಸಿದ್ದೆ. ಸ್ಥಳೀಯ ಹಾಲಿ, ಮಾಜಿ ಶಾಸಕರು ಪುಂಡಲೀಕಪ್ಪ ಜ್ಞಾನಮೋಠೆ ಅವರ ಹೆಸರನ್ನಿಡಲು ಒಮ್ಮತ ವ್ಯಕ್ತಪಡಿಸಿದ್ದರಿಂದ ಸಂತೋಷದಿಂದ ಸಮ್ಮತಿಸಿ, ಅವರ ಹೆಸರಿಟ್ಟಿರುವುದಾಗಿ ತಿಳಿಸಿದರು.

ನಂತರ ಮಾತನಾಡಿದ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ, ಕುಷ್ಟಗಿ ಮೇಲ್ಸೇತುವೆಗೆ ಪುಂಡಲೀಕಪ್ಪ ಜ್ಞಾನಮೋಠೆ ಹೆಸರನ್ನು ಇಡುವುದಲ್ಲದೇ ಅವರ ತತ್ವದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಮುಖ್ಯವಾಗುತ್ತದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.