ಕೊಪ್ಪಳ : ಸಚಿವ ಹಾಲಪ್ಪ ಆಚಾರ್ಗೂ ಮುಖ್ಯಮಂತ್ರಿ ಆಗುವ ಯೋಗ ಇದೆ ಎಂದು ಶಾಸಕ ಶಿವನಗೌಡ ನಾಯಕ್ ಭವಿಷ್ಯ ನುಡಿದಿದ್ದಾರೆ.
ಜಿಲ್ಲೆಯ ಕುಕನೂರ ತಾಲೂಕಿನ ಮಸಬಹಂಚಿನಾಳ ಗ್ರಾಮದಲ್ಲಿ ನಡೆದ ವಿಧಾನ ಪರಿಷತ್ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಇನ್ನು ಹತ್ತಿಪ್ಪತ್ತು ವರ್ಷದಲ್ಲಿ ಹಾಲಪ್ಪ ಆಚಾರ್ಗೆ ಮುಖ್ಯಮಂತ್ರಿ ಯೋಗ ಇದೆ. ನಾನು ಈಶ್ವರಪ್ಪನ ತರಹ ಇಂತವರೇ ಬೇಗ ಆಗಲಿ ಎಂದು ಹೇಳಲ್ಲ ಎಂದರು.
ರಾಜಕೀಯ ಜೀವನದಲ್ಲಿ ಹಾಲಪ್ಪ ಆಚಾರ್ಗೆ ಯೋಗ ಬಂದರೆ ನಾವೇನೂ ಅನ್ನಲ್ಲ. ಭಗವಂತನ ಆಶೀರ್ವಾದವಿದ್ದರೆ ಆ ಸ್ಥಾನಕ್ಕೆ ಅವರು ಮುಟ್ಟಲಿ. ಅವರಲ್ಲಿ ಆ ಶಕ್ತಿ ಇದೆ. ಹಾಲಪ್ಪ ಆಚಾರ್ ಅತ್ಯಂತ ಸರಳ ರಾಜಕಾರಣಿ. ಇಂತಹ ಶಾಸಕರನ್ನು ಪಡೆದಿರುವುದು ನಿಮ್ಮ ಪುಣ್ಯ ಎಂದು ಗುಣಗಾನ ಮಾಡಿದರು.
ಓದಿ: ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆ ತಡೆಯುವ ಪಿಐಎಲ್ ಅರ್ಜಿ ವಜಾ