ಕುಷ್ಟಗಿ (ಕೊಪ್ಪಳ): ಕುಷ್ಟಗಿ ಪುರಸಭೆ ಕುಡಿಯುವ ನೀರಿನ ಸಂಪಿನ ಬಳಿ ಸಾರ್ವಜನಿಕ ಶೌಚಾಲಯದ ಸೆಪ್ಟಿಕ್ ಪೈಪ್ ಸೋರಿಕೆ ಹಿನ್ನೆಲೆ ಶಾಸಕ ಅಮರೇಗೌಡ ಪಾಟೀಲ ಅವರು ಭಾನುವಾರ ಬೆಳಗ್ಗೆ ಭೇಟಿ ನೀಡಿ ವಾಸ್ತವ ಪರಿಸ್ಥಿತಿ ಪರಿಶೀಲಿಸಿದರು.
ಅಲ್ಲಿದ್ದ ಪುರಸಭೆ ಮುಖ್ಯಾಧಿಕಾರಿ ಅಶೋಕ ಪಾಟೀಲ, ನೈರ್ಮಲ್ಯ ಅಧಿಕಾರಿ ಮಹೇಶ ಅಂಗಡಿ ಅವರಿಗೆ ಇಂತಹ ಪ್ರಕರಣ ಮರುಕಳಿಸದಂತೆ ಎಚ್ಚರಿಸಿದರು.
ಪುರಸಭೆ ಪಕ್ಕದಲ್ಲಿದ್ದು, ಅಧಿಕಾರಿಗಳು ಗಮನಿಸಿ ಕ್ರಮ ಕೈಗೊಳ್ಳಬೇಕಿತ್ತು. ಅದರೆ ಅಧಿಕಾರಿಗಳು ಗಮನಿಸದೇ ನಿರ್ಲಕ್ಷಿಸಿದ್ದು, ತಕ್ಷಣವೇ ಸಂಪಿನ ಪಕ್ಕದಲ್ಲಿದ್ದ ಪೈಪ್ಲೈನ್ ತೆರವುಗೊಳಿಸಲು ಸೂಚಿಸಿದರು.
ಇದೇ ವೇಳೆ ಪುರಸಭೆ ಅಧ್ಯಕ್ಷ ಗಂಗಾಧರಸ್ವಾಮಿ ಹಿರೇಮಠ, ಸಾರ್ವಜನಿಕ ಶೌಚಾಲಯದ ಸೆಪ್ಟಿಕ್ ಟ್ಯಾಂಕ್ ಪೈಪ್ಲೈನ್ ಅನ್ನು ಕುಡಿಯುವ ನೀರಿನ ಸಂಪ್ ಪಕ್ಕದಲ್ಲೇ ಕಳೆದ ನಾಲ್ಕೈದು ವರ್ಷದ ಹಿಂದೆಯೇ ಮಾಡಿದ್ದಾರೆ. ಇದು ಅವೈಜ್ಞಾನಿಕ ಕ್ರಮ, ಇಲ್ಲಿನ ಸೆಪ್ಟಿಕ್ ಟ್ಯಾಂಕಿನ ಪೈಪ್ಲೈನ್ ಸಂಪೂರ್ಣ ತೆಗೆದು ಹಾಕಿ, ಸಾರ್ವಜನಿಕ ಶೌಚಾಲಯ ಹೊರಗೆ ನಿರ್ಮಿಸಿ ಕಾಂಪೌಂಡ್ ಕಟ್ಟಿಸಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ:ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ: ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳೆಯರಿಗೆ ಪ್ರಧಾನಿ ಮೋದಿ ಅಭಿನಂದನೆ