ETV Bharat / state

ಸಿದ್ದರಾಮಯ್ಯ ಮಸ್ಕಿಯಲ್ಲಿ 1 ಸಾವಿರ ಮತಗಳಿಂದ ಗೆಲ್ಲಿಸಿಕೊಡು‌ ಎಂದಿದ್ದರು : ಶಾಸಕ ಬಯ್ಯಾಪೂರ - ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ

ನಾನು, ನಮ್ಮ ಅಭ್ಯರ್ಥಿ 10 ರಿಂದ 15 ಸಾವಿರ ಮತಗಳ ಅಂತರದಿಂದ ಗೆದ್ದೆ ಗೆಲ್ತೀವಿ ಎಂದು ಹೇಳಿದಾಗ, ಸಿದ್ದರಾಮಯ್ಯ 1 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿಕೊಡು ಎಂದು ವಿಶ್ವಾಸದಿಂದ ಹೇಳಿದ್ದರು. ನಮ್ಮ ಕಾಂಗ್ರೆಸ್ ಮುಖಂಡರ ಒಗ್ಗಟ್ಟಿನ ಪ್ರದರ್ಶನದಿಂದ ಈ ಫಲಿತಾಂಶ ಬಂದಿದೆ..

mla-amaregowda-patil
ಶಾಸಕ ಬಯ್ಯಾಪೂರ
author img

By

Published : May 2, 2021, 7:54 PM IST

ಕುಷ್ಟಗಿ : ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯನವರು ಮಸ್ಕಿ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಸವನಗೌಡ ತುರ್ವಿಹಾಳರನ್ನು 1 ಸಾವಿರ ಮತಗಳ ಅಂತರದ ಲೀಡ್‌ನಿಂದ ಗೆಲ್ಲಿಸಿ ಸಾಕು ಎಂದಿದ್ದರು ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ನೆನಪಿಸಿಕೊಂಡರು.

ಮಸ್ಕಿ ವಿಧಾನಸಭೆ ಕ್ಷೇತ್ರದ ಚುನಾವಣೆ ಫಲಿತಾಂಶದ ಹಿನ್ನೆಲೆ, ಭಾನುವಾರ ತಮ್ಮ ನಿವಾಸದಲ್ಲಿ ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಏ.17 ರಂದು ಮಸ್ಕಿ ಕ್ಷೇತ್ರದ ಚುನಾವಣೆ ಬಳಿಕ ಕೆಲವೇ ಕ್ಷಣಗಳಲ್ಲಿ ನನ್ನನ್ನು ಸಂಪರ್ಕಿಸಿದ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಷ್ಟು ಮತಗಳಿಂದ ಗೆಲ್ಲುತ್ತಾರೆ ಎಂದು ವಿಚಾರಿಸಿದ್ದರು.

ಆಗ ನಾನು, ನಮ್ಮ ಅಭ್ಯರ್ಥಿ 10 ರಿಂದ 15 ಸಾವಿರ ಮತಗಳ ಅಂತರದಿಂದ ಗೆದ್ದೆ ಗೆಲ್ತೀವಿ ಎಂದು ಹೇಳಿದಾಗ, ಸಿದ್ದರಾಮಯ್ಯ 1 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿಕೊಡು ಎಂದು ವಿಶ್ವಾಸದಿಂದ ಹೇಳಿದ್ದರು. ನಮ್ಮ ಕಾಂಗ್ರೆಸ್ ಮುಖಂಡರ ಒಗ್ಗಟ್ಟಿನ ಪ್ರದರ್ಶನದಿಂದ ಈ ಫಲಿತಾಂಶ ಬಂದಿದೆ.

ಶಾಸಕ ಬಯ್ಯಾಪೂರ

ಈ ಮಸ್ಕಿ ಚುನಾವಣೆ 2023ರ ಚುನಾವಣೆಯ ದಿಕ್ಸೂಚಿ ಎಂದು ಪ್ರತಿ ಪ್ರಚಾರಸಭೆಯಲ್ಲೂ ಹೇಳಿದ್ದೆ. ಮುಂದಿನ 2023ರಲ್ಲಿ ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದರಲ್ಲಿ ಸಂದೇಹವಿಲ್ಲ ಎಂದರು.

ಆಪರೇಷನ್ ಕಮಲಕ್ಕೆ ತಿರುಮಂತ್ರ : ಮುಂದಿನ ದಿನಗಳಲ್ಲಿ ಆಪರೇಶನ್ ಕಮಲ ಮಾಡಲು ಮುಂದಾದವರಿಗೆ ಮಸ್ಕಿ ವಿಧಾನಸಭೆ ಕ್ಷೇತ್ರದ ಚುನಾವಣೆ ರೀತಿಯಲ್ಲಿ ಬುದ್ದಿ ಕಲಿಸಿದಾಗಲೇ ಪ್ರಜಾಪ್ರಭುತ್ವ ಉಳಿಯಲು ಸಾಧ್ಯವಿದೆ. ಆಪರೇಶನ್ ಕಮಲ ಎನ್ನುವ ಸಂಸ್ಕಾರ ಹುಟ್ಟು ಹಾಕಿರುವುದು ಕೆಟ್ಟ ಸಂಸ್ಕೃತಿ. ಇದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ.

ಯಾವುದೇ ವ್ಯಕ್ತಿ ಒಂದು ಪಕ್ಷದಿಂದ ಗೆದ್ದು, ರಾಜಿನಾಮೆ ಕೊಟ್ಟು ದುರುದ್ದೇಶದ ಹಿನ್ನೆಲೆಯಲ್ಲಿ ಇನ್ನೊಂದು ಪಕ್ಷಕ್ಕೆ ಬುದ್ದಿ ಕಲಿಸಿದಾಗ ಮಾತ್ರ ಪ್ರಜಾಪ್ರಭುತ್ವ ಉಳಿಯಲು ಸಾದ್ಯವಿದೆ ಎಂದರು.

ವಿಜಯೇಂದ್ರ ಹಣ ಬಲ ನಂಬಿರುವವರು : ವಿಜಯೇಂದ್ರ ಒಂದು ಪಕ್ಷದ ಮುಖಂಡರು. ಅವರ ಬಗ್ಗೆ ಹಗುರವಾಗಿ ಮಾತನಾಡುವುದಿಲ್ಲ. ಅವರಿಗೆ ಅವರದೇ ಶಕ್ತಿ ಇದ್ದಾಗ್ಯೂ ಎಲ್ಲಾ ಸಂದರ್ಭಗಳಲ್ಲಿ ಶಕ್ತಿ ತೋರಿಸಲು ಸಾಧ್ಯವಿಲ್ಲ.

ವಿಜಯೇಂದ್ರ ಹಣಬಲವೇ ಮುಖ್ಯ ಎಂದು ನಂಬಿದವರಾಗಿದ್ದು, ಇಲ್ಲಿನ ನಾವು ಜನಬಲವೇ ಮುಖ್ಯ ಎಂದು ನಂಬಿದ್ದೇವೆ. ಮಸ್ಕಿ ಕ್ಷೇತ್ರ ಮತದಾರರು ಹಣಕ್ಕೆ ಬೆಲೆ ಕೊಟ್ಟಿಲ್ಲ, ಗುಣಕ್ಕೆ ಬೆಲೆ ಕೊಟ್ಟಿದ್ದಾರೆ ಎಂದರು.

ವೀರಶೈವರು ನನ್ನ ಸಲುವಾಗಿ ಮತ ಹಾಕಿ ಎಂದಿದ್ದರಂತೆ ಸಿಎಂ : ಮಸ್ಕಿ ವಿಧಾನಸಭೆ ಕ್ಷೇತ್ರದ ಚುನಾವಣೆಯಲ್ಲಿ ಸಿಎಂ ಯಡಿಯೂರಪ್ಪ ಮೂರು ದಿನ ಅಲ್ಲಿಯೇ ಇದ್ದು, ವಿವಿಧ ಸಮಾಜದ ಮುಖಂಡರೊಂದಿಗೆ ಚರ್ಚಿಸಿದ್ದರು.

ಇದೇ ವೇಳೆ ವೀರಶೈವ ಸಮಾಜದ 6 ಪಂಗಡದ ಮುಖಂಡರನ್ನು ಕರೆಯಿಸಿ ವೀರಶೈವರೆಲ್ಲರೂ ನನ್ನ ಸಲುವಾಗಿ ಮತಹಾಕಿ ಎಂದು ಕೇಳಿಕೊಂಡು‌ ವೀರಶೈವರ ಮತ ಸೆಳೆಯಲು ಯತ್ನಿಸಿದ್ದರೆಂದು ಬಯ್ಯಾಪೂರ ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.