ಗಂಗಾವತಿ: ಯಾವುದೇ ದೇಗುಲಕ್ಕೆ ಹೋದರೂ ಪ್ರಧಾನಿ ನರೇಂದ್ರ ಮೋದಿ ಕೆಲಕಾಲ ಧ್ಯಾನ ಮಾಡುವುದು ಸಹಜ. ಅದೇ ರೀತಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಂದಿರಕ್ಕೆ ಭೇಟಿ ನೀಡಿದಾಗ ಧ್ಯಾನ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ತಾಲೂಕಿನ ಐತಿಹಾಸಿಕ, ಪುರಾಣ ಪ್ರಸಿದ್ಧಿ ಪಡೆದ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿದ ಸಚಿವ ಸುರೇಶ್ ಕುಮಾರ್ ಪವನಸುತನ ದರ್ಶನ ಪಡೆದರು. ಬಳಿಕ ಪ್ರಶಾಂತವಾಗಿರುವ ದೇಗುಲದ ಆವರಣದಲ್ಲಿ ಕೆಲಕಾಲ ಧ್ಯಾನ ಮಾಡಿದ್ದಾರೆ. ಭೂ ಮಟ್ಟದಿಂದ ಸುಮಾರು 500ಕ್ಕೂ ಹೆಚ್ಚು ಅಡಿ ಎತ್ತರವಿರುವ ಅಂಜನಾದ್ರಿ ಬೆಟ್ಟಕ್ಕೆ 527 ಮೆಟ್ಟಿಲುಗಳಿವೆ. ಬಿಜೆಪಿಯ ಮುಖಂಡರು, ಕೆಲ ಪ್ರಮುಖರೊಂದಿಗೆ ಕಾಲ್ನಡಿಗೆಯಲ್ಲಿ ಉತ್ಸಾಹದಿಂದಲೇ ಬೆಟ್ಟ ಏರಿದ ಸಚಿವರು ಬಳಿಕ ಕೆಲಕಾಲ ಪ್ರಶಾಂತ ವಾತಾವರಣದಲ್ಲಿ ಧ್ಯಾನ ಮಾಡಿದ್ದಾರೆ.