ಕೊಪ್ಪಳ : ಸಾರಿಗೆ ಸಚಿವ ಶ್ರೀರಾಮುಲು ಇಂದು ಜಿಲ್ಲೆಯ ಪಂಪ ಸರೋವರಕ್ಕೆ ಭೇಟಿ ನೀಡಿದರು. ಈ ವೇಳೆ ಅವರು ಕೆಲಕಾಲ ಕೋತಿಗಳೊಂದಿಗೆ ಕಾಲ ಕಳೆದಿದ್ದಾರೆ.
![Minister sriramulu Time Spends With monkeys](https://etvbharatimages.akamaized.net/etvbharat/prod-images/kn-kpl-02-27-hegalerida-vanara-photo-ka10041_27102021131222_2710f_1635320542_294.jpg)
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕಿಷ್ಕಿಂಧಾ ಪ್ರದೇಶದ ಪಂಪಾ ಸರೋವರಕ್ಕೆ ಸಚಿವ ಬಿ. ಶ್ರೀರಾಮುಲು ಭೇಟಿ ನೀಡಿ, ಅಲ್ಲಿನ ದೇವಸ್ಥಾನದಲ್ಲಿ ದರ್ಶನ ಮುಗಿಸಿಕೊಂಡು ಹೊರ ಬಂದಾಗ ಹತ್ತಾರು ಮಂಗಗಳಿಗೆ ಬಾಳೆ ಹಣ್ಣು ನೀಡಿದರು.
![Minister sriramulu Time Spends With monkeys](https://etvbharatimages.akamaized.net/etvbharat/prod-images/kn-kpl-02-27-hegalerida-vanara-photo-ka10041_27102021131222_2710f_1635320542_416.jpg)
ಬಾಳೆ ಹಣ್ಣು ನೀಡುತ್ತಿದ್ದಂತೆ ಆಪ್ತವಾಗಿ ಬೆರೆತು ಕೆಲವೊಂದು ಮಂಗಗಳು ಸಚಿವರ ಹೆಗಲೇರಿದವು. ವಾನರಗಳು ಹೆಗಲೇರಿದರೂ ಸಹ ಸಚಿವ ಶ್ರೀರಾಮುಲು ಅವರು ಆ ಮಂಗಗಳಿಗೆ ಬಾಳೆಹಣ್ಣು ನೀಡಿ ಕೆಲಕಾಲ ಅವುಗಳೊಂದಿಗೆ ಕಾಲ ಕಳೆದಿದ್ದಾರೆ.
![Minister sriramulu Time Spends With monkeys](https://etvbharatimages.akamaized.net/etvbharat/prod-images/kn-kpl-02-27-hegalerida-vanara-photo-ka10041_27102021131222_2710f_1635320542_789.jpg)
ವಾನರಗಳೊಂದಿಗೆ ಕೆಲ ಸಮಯ ಕಾಲಕಳೆದಿದ್ದು ನನ್ನ ಜೀವನದ ಅವಿಸ್ಮರಣಿಯ ಘಟನೆ ಎಂದು ಸಚಿವ ಬಿ. ಶ್ರೀರಾಮುಲು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಶ್ರೀರಾಮುಲು ಹೆಗಲ ಮೇಲೆ ವಾನರ ಕುಳಿತ ಫೋಟೋ ವೈರಲ್ ಆಗಿವೆ.