ETV Bharat / state

ಜನರ ತೀರ್ಪಿನ ಮುಂದೆ ಯಾವ ಬಂಡೆಯೂ ಇಲ್ಲ, ಟಗರು ಇಲ್ಲ:ಸಚಿವ ಬಿ.ಸಿ. ಪಾಟೀಲ್​

author img

By

Published : Nov 10, 2020, 2:38 PM IST

, ಶಿರಾ ಮತ್ತು ಆರ್. ಆರ್. ನಗರ ಉಪಚುನಾವಣೆಯ ಫಲಿತಾಂಶ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್​ಗೆ ಸಿಕ್ಕಿಲ್ವಾ? ಆ ಬಂಡೆ, ಈ ಬಂಡೆ, ಟಗರು ಎನ್ನುತ್ತಿದ್ದವರು ಈಗ ಎಲ್ಲಿ ಹೋದವು? ಏನಾದವು? ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್​​ ಕೊಪ್ಪಳದಲ್ಲಿ ಪ್ರಶ್ನಿಸಿದ್ದಾರೆ.

minister b c patil reaction about by election result
ಸಚಿವ ಬಿ.ಸಿ. ಪಾಟೀಲ್​ ಹೇಳಿಕೆ

ಕೊಪ್ಪಳ: ಜನರ ತೀರ್ಪಿನ ಮುಂದೆ ಯಾವ ಬಂಡೆಯೂ ಇಲ್ಲ, ಟಗರು ಇಲ್ಲ. ಈಗ ಆ ಬಂಡೆಗಳು, ಟಗರುಗಳು ಎಲ್ಲಿ ಹೋದವು ಎಂದು ಕೃಷಿ ಸಚಿವ ಬಿ.ಸಿ‌. ಪಾಟೀಲ್ ಪ್ರಶ್ನಿಸಿದ್ದಾರೆ.

ಸಚಿವ ಬಿ.ಸಿ. ಪಾಟೀಲ್​ ಹೇಳಿಕೆ

ಕೊಪ್ಪಳದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಶಿರಾ ಮತ್ತು ಆರ್. ಆರ್. ನಗರ ಉಪಚುನಾವಣೆಯ ಫಲಿತಾಂಶ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್​ಗೆ ಸಿಕ್ಕಿಲ್ವಾ? ಆ ಬಂಡೆ, ಈ ಬಂಡೆ, ಟಗರು ಎನ್ನುತ್ತಿದ್ದವರು ಈಗ ಎಲ್ಲಿ ಹೋದವು? ಏನಾದವು? ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಂಕಷ್ಟದ ಸಮಯದಲ್ಲಿಯೂ ಮಾಡಿರುವ ಒಳ್ಳೆಯ ಕೆಲಸಗಳಿಂದ ಜನರು ಬಿಜೆಪಿ ಪರವಾಗಿದ್ದಾರೆ‌. ಶಿರಾ, ಆರ್. ಆರ್. ನಗರದಲ್ಲಿ ಬಿಜೆಪಿ ಮುನ್ನಡೆ ಇದೆ. ಮಧ್ಯಪ್ರದೇಶ ಹಾಗೂ ಬಿಹಾರದಲ್ಲಿಯೂ ಎನ್​ಡಿಎ ಮುಂದೆ ಇದೆ‌. ಕಾಂಗ್ರೆಸ್ ಪಕ್ಷ ಅವನತಿಯತ್ತ ಸಾಗಿದೆ ಎಂಬುದರ ಮುನ್ಸೂಚನೆ ಇದು. ಕೆಲವೇ ಕೆಲವು ಜನರ ಹಿಡಿತದಲ್ಲಿರುವ ಕಾಂಗ್ರೆಸ್ ಪಕ್ಷ ಅವನತಿಯತ್ತ ಸಾಗಿದೆ ಎಂಬುದರ ಜ್ವಲಂತ ಉದಾಹರಣೆ ಇದು ಎಂದ್ರು.ಇನ್ನು ಜೆಡಿಎಸ್ ನೆಲಕಚ್ಚಿದೆ. ಆರ್. ಆರ್. ನಗರದಲ್ಲಿ ಜೆಡಿಎಸ್ ಲೆಕ್ಕಕ್ಕೂ ಇಲ್ಲ, ಠೇವಣಿಯೂ ಇಲ್ಲ. ಶಿರಾದಲ್ಲಿ ಮಾತ್ರ ಅನುಕಂಪದಿಂದ ಒಂದಿಷ್ಟು ಫೈಟ್ ನೀಡುತ್ತಿದೆ ಎಂದರು.

ಇನ್ನು ಯೋಗೇಶ್​ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾತಿ ಆಧಾರದ ಮೇಲೆ ಅಥವಾ ಇನ್ಯಾವುದರ ಆಧಾರದ ಮೇಲೆ ಯಾರೂ ಸಹ ಎಂಟ್ರಿಯಾಗೋದು ತಪ್ಪು. ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ತನಿಖೆ ನಡೆಸಿ ಏನು ಕ್ರಮ ಕೈಗೊಳ್ಳಬೇಕು ಅದನ್ನು ಮಾಡುತ್ತಾರೆ. ಯಾರೇ ಆಗಲಿ ಕೊಲೆ ಪ್ರಕರಣದಲ್ಲಿ ಎಂಟ್ರಿಯಾಗೋದು ತಪ್ಪು ಎಂದರು. ಇನ್ನು ಯಡಿಯೂರಪ್ಪ ಅವರು ಈ ಹಿಂದೆ ಸಿಎಂ ಆಗಿದ್ದಾಗ ಗಂಗಾವತಿ ಎಂಜಿನಿಯರಿಂಗ್ ಕಾಲೇಜ್ ಮಂಜುರಾತಿಯಾಗಿತ್ತು. ಕಾರಣಾಂತರದಿಂದ ಅದು ಸ್ಥಗಿತಗೊಂಡಿದೆ. ಈ ವರ್ಷ ಅದನ್ನು ಆರಂಭಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಡಿಸೆಂಬರ್ ತಿಂಗಳಿಂದ ಭತ್ತ ಖರೀದಿ ಮಾಡಲಾಗುತ್ತದೆ ಎಂದು ಸಚಿವ ಬಿ.ಸಿ. ಪಾಟೀಲ್ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.