ಕುಷ್ಟಗಿ (ಕೊಪ್ಪಳ): ಬಿಸಿ ಊಟ ನೌಕರರ ಹುದ್ದೆ ಕಾಯಂಗೊಳಿಸುವಂತೆ ಹಾಗೂ ಶಾಸನಾತ್ಮಕ ಸೌಲಭ್ಯ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಕರ್ನಾಟಕ ಅಕ್ಷರ ದಾಸೋಹ ನೌಕರರ ಸಂಘದ ವತಿಯಿಂದ ಬುಧವಾರ ತಾಲೂಕು ಪಂಚಾಯಿತಿ ಎದುರು ಧರಣಿ ನಡೆಸಿದರು.
ಕ್ವಾರಂಟೈನ್ನಲ್ಲಿದ್ದ ಸೋಂಕಿತರಿಗೆ ಅಡುಗೆ ತಯಾರಿಸಿದ್ದಾರೆ. ಸರ್ಕಾರ ಹೇಳಿದ ಕೆಲಸಗಳನ್ನು ಚಾಚು ತಪ್ಪದೇ ಮಾಡಲಾಗಿದೆ. ಆದರೇ, ಅವರ ವೇತನ ಪಾವತಿಗೆ ಸರ್ಕಾರ ಮೀನಮೇಷ ಏಣಿಸುತ್ತಿದೆ ಎಂದು ಸಿಐಟಿಯು ತಾಲೂಕು ಅಧ್ಯಕ್ಷೆ ಕಲಾವತಿ ಆರೋಪಿಸಿದರು.
6 ತಿಂಗಳ ವೇತನ, ಪಡಿತರ ಹಾಗೂ ಎಲ್ಐಸಿ ಆಧಾರಿತ ಪಿಂಚಣಿ ನಿಗದಿಗೆ ಒತ್ತಾಯಿಸಿದರು. ತಾಲೂಕಾ ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಕಾಶೀಂಸಾಬ್, ಬಿಸಿ ಊಟ ನೌಕರರ ಸಂಘದ ತಾಲೂಕು ಅಧ್ಯಕ್ಷೆ ಅನ್ನಪೂರ್ಣ, ಅಲಿಮಾ ಚಂದ್ರಕಲಾ, ಹನಮಂತಪ್ಪ, ಶಾಂತಮ್ಮ ಇದ್ದರು.