ಗಂಗಾವತಿ: ಬಹುತೇಕ ಬುದ್ಧಿಮಾಂದ್ಯರು ಸಮುದಾಯದ ನಿರ್ಲಕ್ಷ್ಯಕ್ಕೆ ಒಳಗಾಗಿರುತ್ತಾರೆ. ಆದರೆ ಇಲ್ಲೊಬ್ಬ ಬುದ್ಧಿಮಾಂದ್ಯ ವ್ಯಕ್ತಿ ಇಡೀ ಸಮಾಜಕ್ಕೆ ಮಾದರಿಯಾಗುವ ಕೆಲಸ ಮಾಡಿ ಜನರ ಗಮನ ಸೆಳೆದಿದ್ದಾನೆ.
ಕಳೆದ ಹಲವು ದಿನಗಳಿಂದ ಜುಲಾಯಿನಗರದಲ್ಲಿ (ಇಂದಿರಾ ವೃತ್ತ) ಅಲೆದಾಡುತ್ತಿದ್ದ ಸಿಂಹ ಎಂಬ ಬುದ್ಧಿಮಾಂದ್ಯ ವ್ಯಕ್ತಿ, ನಾನಾ ಸಂಘಟನೆಗಳು ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಜನರ ಗಮನ ಸೆಳೆದಿದ್ದಾನೆ.
ಮಾನಸಿಕ ಅಸ್ವಸ್ಥನಾಗಿದ್ದರೂ ಸಹ ಸಾಮಾಜಿಕ ಸ್ವಾಸ್ಥ್ಯದ ಬಗ್ಗೆ ಈ ವ್ಯಕ್ತಿಗೆ ಇರುವ ಕಳಕಳಿಗೆ ಜನ ಬೆರಗಾಗಿದ್ದಾರೆ.