ಕೊಪ್ಪಳ : ಕಾರಟಗಿ ಪಟ್ಟಣದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯನ್ನು ಕ್ವಾರಂಟೈನ್ ಕೇಂದ್ರ ಮಾಡಲು ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ.
ಕೊರೊನಾ ಸೋಂಕಿತರನ್ನು ಕ್ವಾರಂಟೈನ್ ಕೇಂದ್ರಗಳಲ್ಲಿ ಇರಿಸಲು ಸರ್ಕಾರ ಆದೇಶಿಸಿರುವ ಹಿನ್ನೆಲೆ, ಕಾರಟಗಿಯ ಪೊಲೀಸ್ ಕ್ವಾರ್ಟಸ್ ಬಳಿಯ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲು ಬೆಡ್ಗಳನ್ನು ಹಾಕಿ ಸಿದ್ದತೆ ಮಾಡಲಾಗಿತ್ತು. ಇದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ.
ಓದಿ : ಕೊಪ್ಪಳ: 526 ಕೊರೊನಾ ಸೋಂಕಿತರು ಪತ್ತೆ, 8 ಮಂದಿ ಸಾವು
ಕ್ವಾರಂಟೈನ್ ಕೇಂದ್ರ ಮಾಡಲಾಗುತ್ತಿರುವ ಮೊರಾರ್ಜಿ ಶಾಲೆಯ ಸಮೀಪ ಅನೇಕ ಪೊಲೀಸ್ ಕುಟುಂಬಗಳಿವೆ. ಸೋಂಕಿತರನ್ನು ಕ್ವಾರಂಟೈನ್ ಮಾಡುವುದರಿಂದ ತಮಗೂ ಸೋಂಕು ತಗುಲಬಹುದು ಎಂಬ ಆತಂಕದಿಂದ ವಿರೋಧ ವ್ಯಕ್ತಪಡಿಸಿದ್ದಾರೆ.
ಸ್ಥಳೀಯರ ಒತ್ತಾಯಕ್ಕೆ ಮಣಿದು ಶಾಲೆಯಲ್ಲಿ ಕ್ವಾರಂಟೈನ್ ಕೇಂದ್ರ ಮಾಡುವುದನ್ನು ಪುರಸಭೆ ಅಧೀಕ್ಷಕ ರೆಡ್ಡಿ ರಾಯನಗೌಡ ಕೈ ಬಿಟ್ಟಿದ್ದಾರೆ.