ಗಂಗಾವತಿ: ಕಳೆದ ಒಂದು ತಿಂಗಳಿಂದ ತಾಲೂಕಿನ ಜನರಿಗೆ ದುಃಸ್ವಪ್ನದಂತೆ ಕಾಡುತ್ತಿರುವ ಚಿರತೆಗಳ ಹಾವಳಿ ಇದೀಗ ಗಂಗಾವತಿಗೂ ಕಾಲಿಟ್ಟಿದೆ. ಇದರಿಂದ ಸ್ಥಳೀಯರು ಆತಂಕದಲ್ಲಿ ಓಡಾಡುತ್ತಿದ್ದಾರೆ.
ಸುಮಾರು ಐದಾರು ಅಡಿ ಉದ್ದ ಹಾಗೂ ಮೂರೂವರೆ ಅಡಿ ಎತ್ತರ ಇರುವ ಚಿರತೆಯೊಂದು ಗಂಗಾವತಿಯ ಬೆಟ್ಟದಲ್ಲಿ ಕಾಣಿಸಿದ್ದು, ಈ ದೃಶ್ಯವನ್ನು ವ್ಯಕ್ತಿಯೊಬ್ಬರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಬೆಟ್ಟದ ಕಲ್ಲಿನ ತುದಿಯಿಂದ ನಡೆದುಕೊಂಡು ಹೋಗುವ ದೃಶ್ಯವನ್ನು ವ್ಯಕ್ತಿಯೊಬ್ಬರು ಕಳ್ಳಿಗಿಡದ ಹಿಂದೆ ಅಡಗಿ ಕುಳಿತುಕೊಂಡು ಸೆರೆ ಹಿಡಿದಿದ್ದಾರೆ.
ಇದನ್ನೂ ಓದಿ : ಜನನಿಬಿಡ ಪ್ರದೇಶದಲ್ಲಿ ಚಿರತೆ ಹಿಂಡು ಪ್ರತ್ಯಕ್ಷ: ಗಂಗಾವತಿ ಜನತೆಯಲ್ಲಿ ಭೀತಿ
ವ್ಯಕ್ತಿಯ ಈ ಸಾಹಸ ಮೈ ಜುಮ್ ಎನ್ನುವಂತೆ ಮಾಡಿದ್ದು, ಆಕಸ್ಮಿಕವಾಗಿ ಚಿರತೆ ಕಣ್ಣಿಗೆ ಬಿದ್ದಿದ್ದರೆ ಕತೆ ಏನಾಗುತ್ತಿತ್ತು ಎಂಬುದನ್ನು ನೆನಪಿಸಿಕೊಂಡರೆ ಭಯ ಹುಟ್ಟಿಸುವಂತಿದೆ. ಕಣಿವೆ ಆಂಜನೇಯ ದೇವಸ್ಥಾನದ ಸಮೀಪದ ಬೆಟ್ಟದಲ್ಲಿ ಈ ದೃಶ್ಯ ಸೆರೆ ಹಿಡಿಯಲಾಗಿದೆ ಎನ್ನಲಾಗುತ್ತಿದೆ.