ಗಂಗಾವತಿ: ಅಂಜನಾದ್ರಿ, ದುರ್ಗಾ ಬೆಟ್ಟ, ವಿರುಪಾಪುರ ಗಡ್ಡೆಯ ಬಳಿಕ ಇದೀಗ ಆನೆಗೊಂದಿ ರಸ್ತೆಯ ಕಣಿವೆ ಆಂಜನೇಯ ದೇಗುಲದ ಬಳಿಯ ಬೆಟ್ಟದಲ್ಲಿ ಸಂಜೆ ಚಿರತೆ ಮರಿಯೊಂದು ಕಾಣಿಸಿಕೊಂಡಿದೆ.
ಬೆಟ್ಟದ ಸಂದಿನಲ್ಲಿ ಚಿರತೆ ಮರಿಯೊಂದು ಓಡಾಡುತ್ತಿರುವುದನ್ನು ಕಂಡ ದಾರಿಹೋಕರು, ಈ ದೃಶ್ಯವನ್ನು ಸೆರೆಹಿಡಿದಿದ್ದಾರೆ. ಕಳೆದ ಎರಡು ತಿಂಗಳಿಂದ ಆನೆಗೊಂದಿ ಭಾಗದಲ್ಲಿ ಹೆಚ್ಚಿರುವ ಚಿರತೆಗಳ ಹಾವಳಿಯಿಂದ ಜನ ಕಂಗೆಟ್ಟಿದ್ದು, ಚಿರತೆ ಸೆರೆಗೆ ಬೋನು ಇರಿಸಲಾಗಿದೆ. ಅಷ್ಟೇ ಅಲ್ಲದೆ, ಸಿಸಿ ಕ್ಯಾಮರಾ ಹಾಗೂ ದ್ರೋಣ್ ಕ್ಯಾಮರಾಗಳನ್ನು ಇಡಲಾಗಿತ್ತು.
ಇನ್ನು ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲ್ ಕ್ಯಾಂಪ್ನಿಂದ ಆನೆಗಳನ್ನು ತಂದು ಕಾರ್ಯಾಚರಣೆ ಮಾಡಲಾಗಿತ್ತು. ಆದರೆ ಇದು ವಿಫಲವಾಗಿದ್ದು ಸಲಗದ ತಂಡ ಮರಳುತ್ತಿದ್ದಂತೆಯೇ ಮತ್ತೆ ಚಿರತೆ ಹಾವಳಿ ಶುರುವಾಗಿದೆ.