ETV Bharat / state

ಗುಜರಾತ್​ಗೆ ಸಾಗಿಸುತ್ತಿದ್ದ ಅನ್ನಭಾಗ್ಯದ ಅಕ್ಕಿ ವಶಕ್ಕೆ ಪಡೆದ ಅಧಿಕಾರಿಗಳು - ಕುಷ್ಟಗಿ ಅಪರಾಧ ಸುದ್ದಿ

ಅಹಮದಾಬಾದ್​ಗೆ ಸಾಗಿಸಲಾಗುತ್ತಿದ್ದ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಕುಷ್ಟಗಿಯ ಆಹಾರ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

annabhagya rice seized
ಅನ್ನಭಾಗ್ಯ ಅಕ್ಕಿ ವಶಕ್ಕೆ
author img

By

Published : Nov 30, 2020, 9:48 PM IST

ಕುಷ್ಟಗಿ (ಕೊಪ್ಪಳ): ಅಕ್ರಮವಾಗಿ ಗಂಗಾವತಿಯಿಂದ ಗುಜರಾತ್​ನ ಅಹಮದಾಬಾದ್​ಗೆ ಸಾಗಿಸಲಾಗುತ್ತಿದ್ದ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಕುಷ್ಟಗಿಯ ಆಹಾರ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಗಂಗಾವತಿಯ ಆರ್.ಜೆ. ರೋಡ್​​ನಲ್ಲಿರುವ ಮಹಾಶಕ್ತಿ ಟ್ರೇಡರ್ಸ್ ಮೂಲಕ ಅನ್ನಭಾಗ್ಯದ ಅಕ್ಕಿಯನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಅಹಾರ ಇಲಾಖೆಯ ಉಪ ನಿರ್ದೇಶಕ ಶಾಂತನಗೌಡ ಅವರಿಗೆ ಸಿಕ್ಕ ಖಚಿತ ಮಾಹಿತಿ ಮೇರೆಗೆ ಅಹಾರ ಇಲಾಖೆಯ ಶಿರಸ್ತೇದಾರ ರಜನಿಕಾಂತ ಕೆಂಗಾರಿ, ಅಹಾರ ನಿರೀಕ್ಷಕ ನಿತೀನ್ ಕಾರ್ಯಾಚರಣೆ ನಡೆಸಿದ್ದಾರೆ.

ಕುಷ್ಟಗಿ-ಇಳಕಲ್ ಹೆದ್ದಾರಿಯ ಟೋಲ್​ ಗೇಟ್​​ ಬಳಿ ರಾಜಸ್ಥಾನಕ್ಕೆ ಸೇರಿದ ಲಾರಿಯನ್ನು ಪರಿಶೀಲಿಸಿದಾಗ ಅಕ್ರಮವಾಗಿ ಅಕ್ಕಿ ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ. ಲಾರಿಯ ಚಾಲಕ ಶೇಖರಾಮ್ ಬದ್ರಿರಾಮ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದ್ದು, ಲಾರಿ ಮಾಲೀಕನ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಅಹಾರ ಇಲಾಖೆಯ ಶಿರೆಸ್ತೇದಾರ ರಜನೀಕಾಂತ ಕೆಂಗಾರಿ, ಲಾರಿಯಲ್ಲಿ 50 ಕೆಜಿಯ 592 ಚೀಲದಲ್ಲಿ 296 ಕ್ವಿಂಟಾಲ್ ಅನ್ನಭಾಗ್ಯದ ಅಕ್ಕಿ ಇದೆ. ಬಿಲ್​ನಲ್ಲಿ 50 ಕೆಜಿಯ 602 ಚೀಲ ಎಂದು ನಮೂದಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.