ಕುಷ್ಟಗಿ(ಕೊಪ್ಪಳ): ಕುಷ್ಟಗಿ ತಾಲೂಕಿನ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗೃಹರಕ್ಷಕ ದಳದ ಸಿಬ್ಬಂದಿಯೊಬ್ಬರು ಜಯಗಳಿಸಿದ್ದಾರೆ.
ಚಳಗೇರಾ ಮತಕ್ಷೇತ್ರದಲ್ಲಿ ಮಹಾಂತೇಶ ಹಡಪದ ಅವರು ತಮ್ಮ ಪ್ರತಿಸ್ಪರ್ಧಿ ಮಹಾಂತೇಶ ತುರಾಯಿ ವಿರುದ್ಧ 23 ಮತಗಳ ಅಂತರದಿಂದ ವಿಜಯ ಸಾಧಿಸಿದ್ದಾರೆ.
ಮಹಾಂತೇಶ ಹಡಪದ ಅವರಿಗೆ 217 ಮತಗಳು ಬಂದಿದ್ದು ಪ್ರತಿಸ್ಪರ್ಧಿ ಮಹಾಂತೇಶ ತುರಾಯಿ ಅವರಿಗೆ 194 ಮತಗಳು ದೊರೆತಿದ್ದವು.
2010 ರಿಂದ 2015ರ ವರೆಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ಮಹಾಂತೇಶ ತುರಾಯಿ ಈ ಬಾರಿ ಸೋಲು ಕಂಡಿದ್ದಾರೆ. ಗೃಹರಕ್ಷಕ ಸೇವೆಯಲ್ಲಿ ಕ್ಷೌರಿಕ ವೃತ್ತಿಯಲ್ಲಿದ್ದ ಮಹಾಂತೇಶ ಹಡಪದ ಗೆದ್ದಿರುವುದು ಗಮನಾರ್ಹ ಎನಿಸಿದೆ.