ETV Bharat / state

ಹುಲಿ ಈಗ ಬೇಟೆಗೆ ಇಳಿದಿದೆ, ಜಿಂಕೆಗಳು ಮನೆಗೆ ಹೋಗಬೇಕು: ಜನಾರ್ದನ ರೆಡ್ಡಿ ಘರ್ಜನೆ

author img

By

Published : Mar 8, 2023, 7:17 PM IST

''ಹುಲಿ ಬಂಧನದಲ್ಲಿದ್ದರೂ, ಹೊರಗಿದ್ದರೂ ಹುಲಿನೇ. ಅದೇ ಈ ರೆಡ್ಡಿ ಜೈಲಿನಲ್ಲಿದ್ದರೂ, ಹೊರಗಡೆ ಇದ್ದರೂ ರೆಡ್ಡಿನೇ. ಈ ಹುಲಿ ಈಗ ಬೇಟೆ ಆರಂಭಿಸಿದೆ. ಜಿಂಕೆಗಳು ಹೆದರಿ ಮನೆಗೆ ಸೇರಬೇಕಾದ ಕಾಲಘಟ್ಟ ಸಮೀಪಿಸುತ್ತಿದೆ'' ಎಂದು ಕೆಆರ್​ಪಿಪಿ ಸಂಸ್ಥಾಪಕ ಅಧ್ಯಕ್ಷ ಜನಾರ್ದನ ರೆಡ್ಡಿ ಘರ್ಜಿಸಿದರು.

KRPP founder president Janardhana Reddy
ಕೆಆರ್​ಪಿಪಿ ಸಂಸ್ಥಾಪಕ ಅಧ್ಯಕ್ಷ ಜನಾರ್ದನರೆಡ್ಡಿ

ಕನಕಗಿರಿ ಪಟ್ಟಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪಕ್ಷದ ಕಾರ್ಯಕ್ರಮದಲ್ಲಿ ಕೆಆರ್​ಪಿಪಿ ಸಂಸ್ಥಾಪಕ ಅಧ್ಯಕ್ಷ ಜನಾರ್ದನರೆಡ್ಡಿ ಮಾತನಾಡಿದರು

ಗಂಗಾವತಿ: ''ಹುಲಿ ಬಂಧನದಲ್ಲಿದ್ದರೂ, ಹೊರಗಡೆ ಇದ್ದರೂ ಹುಲಿನೇ. ಈ ರೆಡ್ಡಿ ಕೂಡಾ ಜೈಲಿನಲ್ಲಿದ್ದರೂ ಅಥವಾ ಹೊರಗಿದ್ದರೂ ರೆಡ್ಡಿನೇ. ಈಗ ಹುಲಿ ಬೇಟೆ ಆರಂಭಿಸಿದೆ. ಜಿಂಕೆಗಳು ಹೆದರಿ ಮನೆಗೆ ಸೇರಬೇಕಾದ ಕಾಲಘಟ್ಟ ಹತ್ತಿರಬರುತ್ತಿದೆ'' ಎಂದು ಕೆಆರ್​ಪಿಪಿ ಸಂಸ್ಥಾಪಕ ಅಧ್ಯಕ್ಷ ಜನಾರ್ದನ ರೆಡ್ಡಿ ಗುಡುಗಿದರು.

ಕುತಂತ್ರದಿಂದ ನನ್ನನ್ನು ಜೈಲಿಗೆ ಕಳುಹಿಸಿದರು: ಕನಕಗಿರಿ ಪಟ್ಟಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪಕ್ಷದ ಬೃಹತ್ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ''ನಾನು ರಾಜಕೀಯವಾಗಿ ದೊಡ್ಡಮಟ್ಟಕ್ಕೆ ಬೆಳೆದರೆ ನಮ್ಮ ಭವಿಷ್ಯಕ್ಕೆ ಈ ರೆಡ್ಡಿ ಮುಳ್ಳಾಗುತ್ತಾನೆ ಎಂದು ಭಾವಿಸಿದ ಕೆಲವರು ನನ್ನನ್ನು ಕುತಂತ್ರದಿಂದ ಜೈಲಿಗೆ ಅಟ್ಟಿದರು. ಬಳ್ಳಾರಿಯಲ್ಲಿ ವಾಸ ಮಾಡದಂತಹ ಸನ್ನಿವೇಶ ನಿರ್ಮಾಣ ಮಾಡಿದ್ದಾರೆ. ಆದರೆ, ಈ ರೆಡ್ಡಿ ಅದು ಯಾವುದಕ್ಕೂ ಹೆದರುವ ಅಸಾಮಿಯಲ್ಲ ಎಂಬುವುದು ಇದೀಗ ಅವರಿಗೆ ಮನವರಿಕೆ ಆಗಿದೆ. ನಿಧಾನವಾಗಿ ರಾಜಕೀಯದಿಂದ ಕಣ್ಮರೆಯಾಗಬೇಕಾದ ಸನ್ನಿವೇಶ ನಿರ್ಮಾಣವಾಗಿದೆ'' ಎಂದು ರೆಡ್ಡಿ ಪರೋಕ್ಷವಾಗಿ ಬಿಜೆಪಿಯ ಕೆಲವು ನಾಯಕರ ವಿರುದ್ಧ ಕಿಡಿಕಾರಿದರು.

''ಜನಾರ್ದನ ರೆಡ್ಡಿ ಜಾತಿ ನಂಬಿಕೊಂಡ ಬಂದಿಲ್ಲ. ಈ ಜನರನ್ನು ನಂಬಿಕೊಂಡು ಬಂದಿರೋನು. ನಾನು ದೊಡ್ಡ ಮಟ್ಟದಲ್ಲಿ ಬೆಳೆಯುತ್ತೇನೆ ಎಂದು ಎಲ್ಲರೂ ಕುತಂತ್ರ ಮಾಡಿದರು. ಕೆಲಕಾಲ ವನವಾಸ ಅನುಭವಿಸಿದೆ. ಆದರೆ, ನನಗೆ ಭಗವಂತನ ಹಾಗೂ ಜನರ ಆಶೀರ್ವಾದವಿದೆ. ಹೀಗಾಗಿ ಎಲ್ಲ ಸಂಕಷ್ಟದಿಂದಲೂ ಪಾರಾಗಿದ್ದೇನೆ'' ಎಂದು ವಿಶ್ವಾಸ ವ್ಯಕ್ತಪಡಿಸಿದರು.

''ನಾನು ಬರಿ ರಾಜ್ಯದಲ್ಲಿ ಅಲ್ಲ, ದೇಶದಲ್ಲಿ ಇತಿಹಾಸ ನಿರ್ಮಿಸುತ್ತೇನೆ. ಇದಕ್ಕೆ ನೀವೇ ಪ್ರೇರಣೆಯಾಗಬೇಕು. ಕನಕಗಿರಿಯಲ್ಲಿ ಈ ಹಿಂದೆ ಗೆದ್ದವರ ಬಾಡಿ ಲಾಂಗ್ವೇಜ್ ಚೇಂಜ್ ಆಗಿದೆ. ಅವರು ಜನರನ್ನು ನಿರ್ಲಕ್ಷ್ಯ ಮಾಡುತ್ತಿದ್ದರು. ಚುನಾವಣೆ ಸಮೀಪಿಸುತ್ತಿದ್ದಂತೆ ಜನರ ಬಳಿಗೆ ಓಡೋಡಿ ಬರುತ್ತಿದ್ದಾರೆ'' ಎಂದು ಗರಂ ಆದರು.

ಹಾಲಿ-ಮಾಜಿಗಳ ಬಗ್ಗೆ ಪ್ರಸ್ತಾಪ: ''ಇಲ್ಲೊಬ್ಬರನ್ನು ಅಮಾಯಕ, ನಮ್ಮ ಜೊತೆ ಇರುತ್ತಾನೆ ಎಂದು ನಂಬಿ ರೈತರು ಗೆಲ್ಲಿಸಿದರು. ಆದರೆ, ಆ ರೈತರಿಗೆ ಸದ್ಯ ವಂಚನೆಯಾಗಿದೆ. ಆತ ಏನು ಮಾಡಬೇಕಿತ್ತೋ ಅದೆನ್ನೆಲ್ಲವನ್ನೂ ಬಿಟ್ಟು ಏನು ಮಾಡಬಾರದಿತ್ತೋ ಅದೆಲ್ಲವನ್ನೂ ಮಾಡಿದ್ದಾನೆ. ಮತ್ತೊಬ್ಬರು ಜನರ ವಿಶ್ವಾಸಗಳಿಸಿ ಗೆದ್ದ ಬಂದ ನಂತರ, ಜನರ ಸಮಸ್ಯೆ ಆಲಿಸುವುದು ಮರೆತರು. ಪರಿಣಾಮ ಚುನಾವಣೆಯಲ್ಲಿ ಸೋತರು'' ಎಂದು ಪರೋಕ್ಷವಾಗಿ ಮಾಜಿ ಸಚಿವ ಶಿವರಾಜ ತಂಗಡಗಿ ಹಾಗೂ ಹಾಲಿ ಶಾಸಕ ಬಸವರಾಜ ದಡೇಸೂಗೂರು ಹೆಸರು ಹೇಳದೇ ಜನಾರ್ದನರಡ್ಡಿ ಕುಟುಕಿದರು.

''ಹಾಲಿ-ಮಾಜಿಗಳಿಗೆ ಓಟ್ ಹಾಕದೇ ಈ ಬಾರಿ ಕನಕಗಿರಿ ಕ್ಷೇತ್ರದ ಪ್ರಬುದ್ಧ ಜನ ಹೊಸ ಹುಡುಗ ಬಿಸಿರಕ್ತದ ತರುಣ ಡಾ.ವೆಂಕಟರಮಣ ದಾಸರಿ ಚಾರುಲ್ ಅವರಿಗೆ ಮತ ನೀಡಬೇಕು. ಈತ ನಿಮ್ಮವನೇ ನಿಮ್ಮ ಮನೆ ಮಗನೇ ಆಗಿ ಸೇವೆ ಸಲ್ಲಿಸಲಿದ್ದಾನೆ'' ಎಂದು ರೆಡ್ಡಿ ಮನವಿ ಮಾಡಿದರು.

ಚೆನ್ನಮ್ಮನ ಅಭಯ ಹಸ್ತ ಯೋಜನೆ ಘೋಷಣೆ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕನಕಗಿರಿಯಲ್ಲಿ ಹಮ್ಮಿಕೊಂಡಿದ್ದ ಕೆಆರ್​ಪಿಪಿ ಪಕ್ಷದ ಕಾರ್ಯಕ್ರಮದಲ್ಲಿ ರಾಣಿ ಚನ್ನಮ್ಮ ಅಭಯ ಹಸ್ತ ಎಂಬ ಮಹಿಳಾ ಪರ ಯೋಜನೆಯೊಂದನ್ನು ಜನಾರ್ದನ ರೆಡ್ಡಿ ಘೋಷಣೆ ಮಾಡಿದರು. ''ರಾಣಿ ಚೆನ್ನಮ್ಮ ಅಭಯ ಹಸ್ತ ಯೋಜನೆಯ ಮೂಲಕ ಪ್ರತಿ ತಿಂಗಳು ಆರ್ಥಿಕವಾಗಿ ದುರ್ಬಲರಾಗಿರುವ ಮಹಿಳೆಯರಿಗೆ 2,500 ರೂ. ನೀಡುವ ಯೋಜನೆ ಇದಾಗಿದ್ದು, ಒನಕೆ ಓಬವ್ವ ಸ್ವಾಭಿಮಾನ ಯೋಜನೆಯ ಮೂಲಕ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗುವುದು'' ಎಂದು ರೆಡ್ಡಿ ತಿಳಿಸಿದರು. ಇದೇ ವೇದಿಕೆಯಲ್ಲಿ ಮಹಿಳೆಯರನ್ನು ಗುರುತಿಸಿ ಸನ್ಮಾನಿಸುವ ಮೂಲಕ ಅಂತಾರಾಷ್ಟ್ರೀಯ ಮಹಿಳಾ ದಿನ ಆಚರಿಸಲಾಯಿತು.

ಕನಕಗಿರಿ ಅಭ್ಯರ್ಥಿ ಘೋಷಣೆ: ಇದೇ ಸಮಾರಂಭದ ವೇದಿಕೆಯಲ್ಲಿ ಮೀಸಲು ವಿಧಾನಸಭಾ ಕ್ಷೇತ್ರವಾಗಿರುವ ಕನಕಗಿರಿಯಿಂದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಬಳ್ಳಾರಿಯ ವೈದ್ಯ ಡಾ.ವೆಂಕಟರಮಣ ದಾಸರಿ ಚಾರುಲ್ ಸ್ಪರ್ಧಿಸಲಿದ್ದಾರೆ ಎಂದು ಜನಾರ್ದನ ರೆಡ್ಡಿ ಘೋಷಿಸಿದರು. ಕಾಂಗ್ರೆಸ್ ಪಕ್ಷದಿಂದ ಮಾಜಿ ಸಚಿವ ಶಿವರಾಜ ತಂಗಡಗಿ, ಬಿಜೆಪಿಯಿಂದ ಹಾಲಿ ಶಾಸಕ ಬಸವರಾಜ ದಢೇಸುಗೂರು ಅವರಿಗೆ ಟಿಕೆಟ್ ಸಿಗುವ ಲಕ್ಷಣಗಳಿದ್ದು, ಈಗಾಗಲೇ ಜಿದ್ದಾಜಿದ್ದಿನ ಅಖಾಡವಾಗಿ ಗುರುತಿಸಿಕೊಂಡಿರುವ ಕನಕಗಿರಿಯಲ್ಲಿ ರೆಡ್ಡಿ ಪಕ್ಷದಿಂದ ವೈದ್ಯನನ್ನು ಕಣಕ್ಕಿಳಿಸಿರುವುದು ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ದಾರಿ ತಪ್ಪಿಸುವ, ಯಾಮಾರಿಸುವ ಯೋಜನೆಗೆ ಕಿವಿಗೊಡಬೇಡಿ : ಕಾಂಗ್ರೆಸ್ ಉಚಿತ ಯೋಜನೆಗಳಿಗೆ ಸಿಎಂ ತಿರುಗೇಟು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.