ETV Bharat / state

ಕೊಪ್ಪಳದಲ್ಲಿ ನಿಷೇಧದ ನಡುವೆಯೂ ಮಾರುಕಟ್ಟೆ ತೆರೆದು ವ್ಯಾಪಾರ! - koppala covid news

ಬೆಳವನಾಳ ಸಮೀಪದ ಎಪಿಎಂಸಿಯ ಹೋಲ್​​ ಸೇಲ್ ತರಕಾರಿ ಮಾರುಕಟ್ಟೆಯಲ್ಲಿ ನಿಷೇಧದ ನಡುವೆಯೂ ಇಂದು ಮುಂಜಾನೆ ವ್ಯಾಪಾರ ವಹಿವಾಟು ನಡೆಯಿತು‌.

koppala people violate covid rules !
ನಿಷೇಧದ ನಡುವೆಯೂ ವ್ಯಾಪಾರ!
author img

By

Published : May 22, 2021, 9:07 AM IST

ಕೊಪ್ಪಳ: ಕೊರೊನಾ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ವ್ಯಾಪಾರ-ವಹಿವಾಟಿಗೆ ನಿಷೇಧ ಹೇರಲಾಗಿತ್ತು. ನಿಷೇಧದ ನಡುವೆಯೂ ಬೆಳವನಾಳ ಸಮೀಪದ ಎಪಿಎಂಸಿಯ ಹೋಲ್ ಸೇಲ್ ತರಕಾರಿ ಮಾರುಕಟ್ಟೆಯಲ್ಲಿ ಇಂದು ಬೆಳಗ್ಗೆ ವ್ಯಾಪಾರ ಜೋರಾಗಿ ನಡೆದಿದೆ. ನಿಯಮಗಳನ್ನು ಗಾಳಿಗೆ ತೂರಿ ವ್ಯಾಪಾರ-ವಹಿವಾಟು ನಡೆಸಿದ್ದಾರೆ.

ನಿಷೇಧದ ನಡುವೆಯೂ ವ್ಯಾಪಾರ!

ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆ ಈ ತರಕಾರಿ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟನ್ನು ಜಿಲ್ಲಾಧಿಕಾರಿ ನಿಷೇಧಿಸಿದ್ದರು. ನಿನ್ನೆ ತಡರಾತ್ರಿ ರೈತರನ್ನು ಎಪಿಎಂಸಿ ಅಧಿಕಾರಿಗಳು ವಾಪಸ್ ಕಳುಹಿಸಿದ್ದರು.

ಇದನ್ನೂ ಓದಿ: ಕುಕ್ಕುಟೋದ್ಯಮದ ಮೇಲೂ ಕೋವಿಡ್​ ಕರಿಛಾಯೆ.. ಫೌಲ್ಟ್ರಿ ಮಾಲೀಕರು ತತ್ತರ

ರೈತರಿಂದಲೇ ನೇರವಾಗಿ ಮನೆ ಮನೆಗೆ ತರಕಾರಿ ಮಾರಾಟ ಮಾಡಲು ಜಿಲ್ಲಾಡಳಿತ ರೈತರಿಗೆ ಅವಕಾಶ ನೀಡಲಾಗಿತ್ತು. ಆದರೆ ಬೆಳಗಿನ ಜಾವ ನಿಷೇಧದ ನಡುವೆಯೂ ನಿಯಮಗಳನ್ನು ಲೆಕ್ಕಿಸದೇ ವ್ಯಾಪಾರ ವಹಿವಾಟು ನಡೆದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.