ಗಂಗಾವತಿ : ಚೆಕ್ಪೋಸ್ಟ್ಗಳಲ್ಲಿ ಕಣ್ತಪ್ಪಿಸಿ ಕೊರೊನಾ ಸೋಂಕು ಪೀಡಿತ ಜಿಲ್ಲೆಗಳ ಪಟ್ಟಿ ಹಾಗೂ ರೆಡ್ಜೋನ್ ನಲ್ಲಿರುವ ಬಳ್ಳಾರಿ ಜಿಲ್ಲೆಯಿಂದ ಜನರು ಅಕ್ರಮವಾಗಿ ಕೊಪ್ಪಳ ಜಿಲ್ಲೆಯ ಗಡಿ ಪ್ರವೇಶಿಸುವುದನ್ನು ತಡೆಯಲು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಬೊಂಬಾಟ್ ಐಡಿಯಾ ಕಂಡುಕೊಂಡಿದ್ದಾರೆ.
ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಯ ಗಡಿಯನ್ನು ತುಂಗಭದ್ರಾ ನದಿ ವಿಭಜಿಸಿದ್ದು, ಇದೀಗ ಇದೇ ನದಿಯ ಮೂಲಕ ಜನ ಅಕ್ರಮವಾಗಿ ಸಿರುಗುಪ್ಪ ಮತ್ತು ಕಂಪ್ಲಿ ಭಾಗದಿಂದ ಬರುತ್ತಿದ್ದಾರೆ. ಇದನ್ನು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಪತ್ತೆ ಮಾಡಿದ್ದು ನದಿಯಲ್ಲಿ ದೊಡ್ಡ ಪ್ರಮಾಣದ ಕಂದಕ ಸೃಷ್ಟಿಸುತ್ತಿದ್ದಾರೆ.
ತಾಲೂಕು ಪಂಚಾಯಿತಿ ಇಒ ಮೋಹನ್ ಸೂಚನೆ ಮೆರೆಗೆ ಸಿರುಗುಪ್ಪಾ ತಾಲೂಕಿನ ಮಣ್ಣೂರು- ಸೂಗೂರು ಭಾಗದಿಂದ ಬರುವ ಜನರನ್ನು ನಿಯಂತ್ರಿಸಲು ಪಿಡಿಒ ಸುರೇಶ ಉಪ್ಪಾರ, ನಂದಿಹಳ್ಳಿ- ಶಾಲಿಗನೂರು ಸಮೀಪದ ನದಿಯಲ್ಲಿ ದೊಡ್ಡ ಪ್ರಮಾಣದ ಹೊಂಡ ನಿರ್ಮಿಸಿದ್ದಾರೆ.