ETV Bharat / state

ಜನಜಂಗುಳಿ ನಿಯಂತ್ರಣಕ್ಕೆ 'ಕೊಪ್ಪಳ ವನ್​'... ಮನೆ ಬಾಗಿಲಿಗೆ ಬರಲಿವೆ ಅಗತ್ಯ ವಸ್ತುಗಳು!

author img

By

Published : May 6, 2021, 11:01 AM IST

Updated : May 6, 2021, 2:25 PM IST

ಡಿಜಿಟಲ್ ಮಾರುಕಟ್ಟೆಯನ್ನು ಸ್ಥಳೀಯವಾಗಿ ನಿರ್ಮಾಣ ಮಾಡುವ ಉದ್ದೇಶದಿಂದ ಕೊಪ್ಪಳದ ಶಿವಬಸವನಗೌಡ ಪಾಟೀಲ್ ಎಂಬ ಯುವಕ 'ಕೊಪ್ಪಳ ವನ್' ಎಂಬ ವೆಬ್‍ಸೈಟ್ ರಚಿಸಿ ಆ ಮೂಲಕ ಗ್ರಾಹಕರಿಗೆ ಸೇವೆ ಒದಗಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

koppal
ಕೊಪ್ಪಳ ವನ್​ ಆ್ಯಪ್​ ಅಭಿವೃದ್ಧಿ

ಕೊಪ್ಪಳ: ಕೊರೊನಾ ಸೋಂಕು ಹರಡುತ್ತಿರುವ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಜನಜಂಗುಳಿಯನ್ನು ನಿಯಂತ್ರಣ ಮಾಡೋದು ಅತ್ಯಂತ ಮುಖ್ಯವಾದ ವಿಷಯ. ಇದಕ್ಕೆ ಡಿಜಿಟಲ್ ಮಾರುಕಟ್ಟೆಗಳು ಪೂರಕವಾಗಿ ಕೆಲಸ ಮಾಡುತ್ತಿವೆ. ಅಂತೆಯೇ ಕೊಪ್ಪಳದ ವ್ಯಕ್ತಿಯೊಬ್ಬರು 'ಕೊಪ್ಪಳ ವನ್' ಎಂಬ ವೆಬ್‍ಸೈಟ್ ರಚಿಸುವ ಮೂಲಕ ರೈತರಿಂದ ನೇರವಾಗಿ ಗ್ರಾಹಕರಿಗೆ ಉತ್ಪನ್ನಗಳನ್ನು ತಲುಪಿಸಲು ಪ್ರಯತ್ನ ನಡೆಸಿದ್ದಾರೆ.

ಜನರು ತಮಗೆ ಬೇಕಾದ ವಸ್ತುಗಳನ್ನು ಆಯ್ಕೆ ಮಾಡಿಕೊಳ್ಳುವ ಮತ್ತು ಮಾರುಕಟ್ಟೆಗೆ ಹೋಗಿ ವಸ್ತುಗಳನ್ನು ಖರೀದಿಸುವ ಕಷ್ಟವನ್ನು ಡಿಜಿಟಲ್ ಮಾರುಕಟ್ಟೆ ತಪ್ಪಿಸಿದೆ. ಇದೇ ಡಿಜಿಟಲ್ ಮಾರುಕಟ್ಟೆಯನ್ನು ಸ್ಥಳೀಯವಾಗಿ ನಿರ್ಮಾಣ ಮಾಡುವ ಉದ್ದೇಶದಿಂದ ಕೊಪ್ಪಳದ ಶಿವಬಸವನಗೌಡ ಪಾಟೀಲ್ ಎಂಬ ಯುವಕ 'ಕೊಪ್ಪಳ ವನ್' ಎಂಬ ವೆಬ್‍ಸೈಟ್ ರಚಿಸಿ ಆ ಮೂಲಕ ಗ್ರಾಹಕರಿಗೆ ಸೇವೆ ಒದಗಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

ಜನಜಂಗುಳಿ ನಿಯಂತ್ರಣಕ್ಕೆ 'ಕೊಪ್ಪಳ ವನ್​'.

ವಿಶೇಷವೆಂದರೆ ಹಣ್ಣು, ತರಕಾರಿಯಿಂದ ಹಿಡಿದು ರೈತರು ಬೆಳೆದ ಇನ್ನಿತರೆ ಉತ್ಪನ್ನಗಳು ಗ್ರಾಹಕರಿಗೆ ಬೇಕಾದ ಸುಮಾರು 60 ವಸ್ತುಗಳನ್ನು ತನ್ನ ವೆಬ್‍ಸೈಟ್​ನಲ್ಲಿ ಅಳವಡಿಸಿದ್ದಾನೆ. ಈಗ ಕೊರೊನಾ ಹರಡುತ್ತಿರುವ ಸಂದರ್ಭವಾಗಿರುವುದರಿಂದ ಮಾರುಕಟ್ಟೆಯಲ್ಲಿ ಜನಜಂಗುಳಿಯನ್ನು ನಿಯಂತ್ರಿಸಬೇಕಾಗಿದೆ. ಹೀಗಾಗಿ ಈ 'ಕೊಪ್ಪಳ ವನ್' ಮೂಲಕ ಗ್ರಾಹಕರಿಗೆ ಸೇವೆ ಒದಗಿಸಲಾಗುತ್ತಿದೆ.

'ಕೊಪ್ಪಳ ವನ್'ನಲ್ಲಿ ಹಣ್ಣು, ತರಕಾರಿ, ಹಾಲು, ಮೊಸರು, ದಿನಸಿ, ಚಾಕೋಲೇಟ್ ಸೇರಿದಂತೆ ಹಲವಾರು ಉತ್ಪನ್ನಗಳನ್ನು ಸಹ ಅಳವಡಿಸಲಾಗಿದೆ. ರೈತರ ಉತ್ಪನ್ನಗಳನ್ನು ನೇರವಾಗಿ ಖರೀದಿಸಿ, ಖರೀದಿಯ ದರದಲ್ಲಿಯೇ ಗ್ರಾಹಕರಿಗೆ ತಲುಪಿಸುವುದು ಇವರ ಉದ್ದೇಶವಾಗಿದೆ. ಇದರಿಂದಾಗಿ ರೈತರಿಗೂ ಒಂದಿಷ್ಟು ಆದಾಯ ಬರುತ್ತದೆ.

ಗ್ರಾಹಕರು ಇಷ್ಟೇ ಖರೀದಿಸಬೇಕು ಎಂದೇನೂ ಇಲ್ಲ. ಅರ್ಧ ಕೆಜಿ ತರಕಾರಿ ಕೇಳಿದರೂ ಸಹ ಅದನ್ನು ಮನೆ ಬಾಗಿಲಿಗೆ ತಲುಪಿಸುವ ಉದ್ದೇಶದಿಂದ 'ಕೊಪ್ಪಳ ವನ್' ವೆಬ್‍ಸೈಟ್ ಪರಿಚಯಿಸುತ್ತಿದ್ದೇವೆ ಎನ್ನುತ್ತಾರೆ ಶಿವಬಸವನಗೌಡ ಪಾಟೀಲ್.

ಈಗ ಕೊರೊನಾ ಸಂದರ್ಭವಾಗಿರುವುದರಿಂದ ಜನರು ಮಾರುಕಟ್ಟೆಯಲ್ಲಿ ಗುಂಪು ಗುಂಪಾಗಿ ಸೇರಬಾರದು. ಇದಕ್ಕಾಗಿ ಡಿಜಿಟಲ್ ಮಾರುಕಟ್ಟೆಯ ಮೂಲಕ ಜನರು ತಮಗೆ ಬೇಕಾದ ವಸ್ತುಗಳನ್ನು ಕೊಳ್ಳಲು ಅವಕಾಶವಿದೆ. ಈಗ ಮಾವಿನ ಹಣ್ಣಿನ ಸೀಸನ್ ಆಗಿರುವುದರಿಂದ ಸ್ಥಳೀಯವಾಗಿರುವ 'ಕೊಪ್ಪಳ ವನ್'ನಲ್ಲಿಯೂ ಮಾವಿನ ಹಣ್ಣುಗಳನ್ನು ಮಾರಾಟ ಮಾಡಲಾಗುತ್ತದೆ. ಗ್ರಾಹಕರಿಗೆ ಎಷ್ಟು ಹಣ್ಣು ಬೇಕೋ ಅಷ್ಟನ್ನು 'ಕೊಪ್ಪಳ ವನ್'ನವರು ತಂದು ಮನೆ ಬಾಗಿಲಿಗೆ ಮುಟ್ಟಿಸುತ್ತಾರೆ. ಪ್ರಸ್ತುತ ಸಂದರ್ಭದಲ್ಲಿ ಇದೊಂದು ಒಳ್ಳೆಯ ಪ್ರಯತ್ನ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಕೃಷ್ಣ ಉಕ್ಕುಂದ.

Last Updated : May 6, 2021, 2:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.