ಕೊಪ್ಪಳ: ಜಿಲ್ಲೆಯ ಗಂಗಾವತಿ ನಗರ ಸೇರಿ 11 ಪ್ರದೇಶಗಳನ್ನು ನಿನ್ನೆ ರಾತ್ರಿಯಿಂದ ಲಾಕ್ಡೌನ್ ಮಾಡಲು ನೀಡಿದ್ದ ಆದೇಶವನ್ನು ಜಿಲ್ಲಾಡಳಿತ ಹಿಂಪಡೆದಿದೆ. ಈ ಮೂಲಕ 10 ದಿನಗಳ ಲಾಕ್ಡೌನ್ ಎದುರಿಸಬೇಕಾಗಿದ್ದ 11 ಪ್ರದೇಶಗಳ ಜನರು ನಿರಾಳರಾಗಿದ್ದಾರೆ.
ಲಾಕ್ಡೌನ್ ಆದೇಶ ಹಿಂಪಡೆದಿರುವ ಕುರಿತು ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಾಳ್ಕರ್, ಜುಲೈ. 21 ರಿಂದ ಜಿಲ್ಲೆಯ ಕೆಲ ಭಾಗಗಳಲ್ಲಿ ಲಾಕ್ಡೌನ್ ಮಾಡಲು ನಿನ್ನೆ ಆದೇಶ ಹೊರಡಿಸಲಾಗಿತ್ತು. ಸರ್ಕಾರದ ಸೂಚನೆ ಹಿನ್ನೆಲೆ ಈ ಆದೇಶವನ್ನು ಹಿಂಪಡೆಯಲಾಗಿದೆ. ಸೋಂಕು ಕಂಟ್ರೋಲ್ ಮಾಡುವ ಕುರಿತಂತೆ ಅಗತ್ಯ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಳ್ಳುತ್ತದೆ ಎಂದು ತಿಳಿಸಿದ್ದಾರೆ.
ಲಾಕ್ಡೌನ್ ಭೀತಿಯಲ್ಲಿ ಜಿಲ್ಲೆಯ ಗಂಗಾವತಿ ನಗರದಲ್ಲಿ ಇಂದು ಸಾವಿರಾರು ಜನರು ಮಾರ್ಕೆಟ್ನಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದಿದ್ದರು.