ಕುಷ್ಟಗಿ: ಕೊರೊನಾ ವೈರಸ್ ಲಾಕ್ ಡೌನ್ ಹಿನ್ನೆಲೆಯಲ್ಲಿ ತೊಂದರೆಯ ನಡುವೆಯೂ ಕೊಪ್ಪಳ ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಒಟ್ಟು 6,11,601 ರೂ. ದೇಣಿಗೆ ನೀಡುವ ಮೂಲಕ ರಾಜ್ಯದ ಸಂಕಷ್ಟಕ್ಕೆ ಸ್ಪಂದಿಸಿದೆ.
ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಮೂಲಕ ಸಂಗ್ರಹಿಸಿದ ಒಟ್ಟು 6,11,601 ರೂ.ಮೊತ್ತದ ಚಕ್ನ್ನು ಮುಖ್ಯಮಂತ್ರಿಗಳ ಕೋವಿಡ್-19 ಪರಿಹಾರ ನಿಧಿಗೆ ಕೊಪ್ಪಳದ ಸಹಕಾರ ಸಂಘಗಳ ಉಪನಿಬಂಧಕ ಗವಿಸಿದ್ದಪ್ಪ ಸಿದ್ನೆಕೊಪ್ಪ ಅವರಿಗೆ ಹಸ್ತಾಂತರಿಸಲಾಯಿತು.
ಕೊಪ್ಪಳ ತಾಲೂಕು ಹಾಲು ಉತ್ಪಾದಕರ ಸಂಘಗಳಿಂದ 1,00,000 ರೂ., ಗಂಗಾವತಿ 2,13,301ರೂ., ಯಲಬುರ್ಗಾ 1,88,800 ರೂ, ಕುಷ್ಟಗಿ 1,09,500 ರೂ. ಸೇರಿದಂತೆ ಒಟ್ಟು 6,11,601 ರೂ.ಮೊತ್ತದ ಚೆಕ್ಅನ್ನು ಒಕ್ಕೂಟದ ಉಪಾಧ್ಯಕ್ಷ ಶಿವಪ್ಪ ವಾದಿ ಹಾಗೂ ನಿರ್ದೇಶಕರು ಹಸ್ತಾಂತರಿಸಿದರು.