ಕೊಪ್ಪಳ: ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವುದನ್ನು ನಿಯಂತ್ರಿಸಲು ಮೇ 17ರಿಂದ 5 ದಿನಗಳ ಕಾಲ ಸಂಪೂರ್ಣವಾಗಿ ಕೊಪ್ಪಳ ಜಿಲ್ಲೆ ಲಾಕ್ಡೌನ್ ಮಾಡುವಂತೆ ಸೂಚಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಇಂದು ಅಗತ್ಯ ವಸ್ತುಗಳ ಖರೀದಿಗೆ ಜನರು ಮುಗಿಬಿದ್ದಿದ್ದಾರೆ.
ನಗರದ ಜೆಪಿ ಮಾರ್ಕೆಟ್, ಜವಾಹರ ರಸೆಯಲ್ಲಿ ಫುಲ್ ಟ್ರಾಫಿಕ್ ಜಾಮ್ ಆಗಿತ್ತು. ಐದು ದಿನಗಳ ಕಾಲ ಸಂಪೂರ್ಣ ಲಾಕ್ಡೌನ್ ಮಾಡುವುದಾಗಿ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ನಿನ್ನೆ ಘೋಷಣೆ ಮಾಡಿದ್ದರು. ಇದರಿಂದಾಗಿ ಇಂದು ಬೆಳಗ್ಗೆಯಿಂದಲೇ ಸಾವಿರಾರು ಜನರು ಅಗತ್ಯ ವಸ್ತುಗಳ ಖರೀದಿಗೆ ಮಾರುಕಟ್ಟೆಯಲ್ಲಿ ಮುಗಿಬಿದ್ದಿದ್ದಾರೆ. ಸಾಮಾಜಿಕ ಅಂತರ ಮರೆತು ಜನರು ಖರೀದಿಯಲ್ಲಿ ತೊಡಗಿದ್ದರು. ಜನದಟ್ಟಣೆಯಿಂದಾಗಿ ಮಾರುಕಟ್ಟೆಯಲ್ಲಿ ಬೈಕ್, ಆಟೋ, ಗೂಡ್ಸ್ ವಾಹನಗಳು ಸಿಲುಕಿ ಹಾಕಿಕೊಂಡಿದ್ದವು. ಟ್ರಾಫಿಕ್ ಜಾಮ್ ಕ್ಲೀಯರ್ ಮಾಡಲು ಟ್ರಾಫಿಕ್ ಪೊಲೀಸರು ಹರಸಾಹಸ ಪಡಬೇಕಾಯಿತು.
ಇನ್ನು ಕುಷ್ಟಗಿಯಲ್ಲೂ ಬೆಳ್ಳಂಬೆಳಗ್ಗೆ ಅಗತ್ಯ ವಸ್ತುಗಳನ್ನ ಖರೀದಿಸಲು ಜನರು ಮುಗಿಬಿದ್ದರು. ತಾಲೂಕು ಕ್ರೀಡಾಂಗಣದಲ್ಲಿ ಹಾಗೂ ಸಂತೆ ಜನದಟ್ಟಣೆಯಿಂದ ಕೂಡಿತ್ತು. ಕಿರಾಣಿ ಅಂಗಡಿ, ಮೆಡಿಕಲ್ ಶಾಪ್ ಇತರೆ ಅಗತ್ಯ ವಸ್ತುಗಳನ್ನು ಜನ ಮುಗಿಬಿದ್ದು ಖರೀದಿಸಿದರು.
ಇದನ್ನೂ ಓದಿ : ಗಮನಿಸಿ; ಮೇ 17 ರಿಂದ ಐದು ದಿನ ಕೊಪ್ಪಳ ಜಿಲ್ಲೆ ಕಂಪ್ಲೀಟ್ ಲಾಕ್ಡೌನ್