ETV Bharat / state

ಕೊಪ್ಪಳದಲ್ಲಿ 224 ಮಂದಿಗೆ ಕೋವಿಡ್ ಪಾಸಿಟಿವ್: ಐವರು ಸೋಂಕಿತರು ಸಾವು - ಕೊಪ್ಪಳ ಕೋವಿಡ್ ಪ್ರಕರಣ

ಕೊಪ್ಪಳ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಮತ್ತು ಸಾವಿನ ಸಂಖ್ಯೆಯಲ್ಲಿ ಏರಿಳಿತ ಆಗುತ್ತಲೇ ಇದೆ. ಸದ್ಯ, ಜಿಲ್ಲೆಯಲ್ಲಿ 4,132 ಸಕ್ರಿಯ ಪ್ರಕರಣಗಳಿದ್ದು, ಸೋಂಕಿತರಿಗೆ ಕೋವಿಡ್ ಆಸ್ಪತ್ರೆ ಮತ್ತು ಕೋವಿಡ್ ಕೇರ್​ ಸೆಂಟರ್​ಗಳಲ್ಲಿ ಚಿಕಿತ್ಸೆ ನೀಡಲಾಗ್ತಿದೆ.

Koppal Covid update
ಕೊಪ್ಪಳ ಕೋವಿಡ್ ಸುದ್ದಿ
author img

By

Published : May 25, 2021, 8:59 AM IST

ಕೊಪ್ಪಳ: ಜಿಲ್ಲೆಯಲ್ಲಿ ಸೋಮವಾರ 224 ಹೊಸ ಕೋವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, 5 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.

ಕೊಪ್ಪಳ ತಾಲೂಕಿನಲ್ಲಿ 61, ಗಂಗಾವತಿ 85, ಕುಷ್ಟಗಿ 18, ಹಾಗೂ ಯಲಬುರ್ಗಾ ತಾಲೂಕಿನ 60 ಜನರು ಸೇರಿ ಒಟ್ಟು 224 ಮಂದಿಗೆ ಪಾಸಿಟಿವ್ ಬಂದಿದೆ. ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 28,797 ಆಗಿದ್ದು, ಇದುವರೆಗೆ 472 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.

Koppal Covid update
ಜಿಲ್ಲಾಡಳಿತ ಹೆಲ್ತ್ ಬುಲೆಟಿನ್

ಇದನ್ನೂ ಓದಿ: ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖ: ಕೆಂಪು ವಲಯದಿಂದ ಕಿತ್ತಳೆಗೆ ತಿರುಗಿದ ತುಮಕೂರು ಜಿಲ್ಲೆ

ಸೋಮವಾರ 534 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಇದುವರೆಗೆ ಒಟ್ಟು 24,193 ಮಂದಿ ಸೋಂಕು ಮುಕ್ತರಾಗಿದ್ದಾರೆ. ಸದ್ಯ, ಜಿಲ್ಲೆಯಲ್ಲಿ 4,132 ಸಕ್ರಿಯ ಪ್ರಕರಣಗಳಿವೆ. ಒಟ್ಟು, 2,966 ಸೋಂಕಿತರು ಹೋಂ ಐಸೋಲೇಷನ್​​ಗೆ ಒಳಗಾಗಿದ್ದು, 1,166 ಜನ ಸೋಂಕಿತರು ಕೋವಿಡ್ ಆಸ್ಪತ್ರೆಯಲ್ಲಿ ಹಾಗೂ ಕೋವಿಡ್ ಕೇರ್ ಸೆಂಟರ್​ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.