ಗಂಗಾವತಿ: ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಹಾಗೂ ಚುನಾವಣೆಗೆ ಇನ್ನೂ ಎರಡು - ಮೂರು ವರ್ಷ ಬಾಕಿ ಇರುವಾಗಲೇ ಕಾಂಗ್ರೆಸ್ನಲ್ಲಿ ಸಿಎಂ ಕುರ್ಚಿಗೆ ಟವಲ್ ಹಾಕುವಂತಹ ಗೊಂದಲ ಎರಡೂ ಪಕ್ಷಗಳಲ್ಲಿ ಆರಂಭವಾಗಿದೆ. ಇಂತಹ ದೊಂಬರಾಟ ಸರಿಯಲ್ಲ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಹೆಚ್.ಆರ್. ಶ್ರೀನಾಥ್ ಹೇಳಿದ್ದಾರೆ.
ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಸದ್ಯ ರಾಜ್ಯದ ಜನರನ್ನು ಕೊರೊನಾದಿಂದ ಪಾರು ಮಾಡಬೇಕಿದೆ. ಎರಡೂ ಪಕ್ಷಗಳು ರಾಜಕೀಯ ಕೆಸರರೆಚಾಟದಲ್ಲಿ ತೊಡಗಿರುವುದು ಸರಿಯಲ್ಲ ಎಂದು ಸಲಹೆ ನೀಡಿದರು.
ಇದೇ ರೀತಿ, ಪಕ್ಷಗಳು ವೈಯಕ್ತಿಕ ಲಾಭಕ್ಕಾಗಿ, ಸಾರ್ವಜನಿಕರ ಹಿತಾಸಕ್ತಿ ಮರೆತೆರೆ ಕೊರೊನಾ ಮತ್ತಷ್ಟು ಉಲ್ಬಣವಾಗುವ ಲಕ್ಷಣವಿದೆ. ಮುಂಬರುವ 2022-23ರ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಗಳು ನಡೆಯುವುದೇ ಅನುಮಾನ. ಈ ಹಂತಕ್ಕೆ ಹೋಗುವ ಮುನ್ನವೇ ಎಲ್ಲರೂ ಎಚ್ಚೆತ್ತುಕೊಳ್ಳಬೇಕು ಎಂದರು.
ಇದನ್ನೂ ಓದಿ:ಸಿಲಿಂಡರ್ Blast: ಗೋಕಾಕ್ನಲ್ಲಿ ಹೊತ್ತಿ ಉರಿದ ಮನೆ
ಚುನಾವಣೆಗೆ ಇನ್ನೂ ಎರಡು ವರ್ಷ ಬಾಕಿಯಿದೆ. ಆಗಲೇ ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯನ ಗುಂಪು ಲಾಬಿ ಆರಂಭಿಸಿರೋದು ಸರಿಯಲ್ಲ. ಮುಂದೆ ಬಿಎಸ್ವೈ, ಹೆಚ್ಡಿಕೆ, ಖರ್ಗೆ, ಡಿ.ಕೆ. ಶಿವಕುಮಾರ್ ಯಾರೇ ಸಿಎಂ ಆಗಬಹುದು. ನಿರ್ಧಾರ ಜನರ ಕೈಯಲ್ಲಿದೆ. ಅನಗತ್ಯ ಗೊಂದಲ ಬಿಟ್ಟು ಕೊರೊನಾ ಹೋಗಲಾಡಿಸಲು ಸಾಮೂಹಿಕ ಯತ್ನ ಮಾಡಬೇಕು ಎಂದು ಶ್ರೀನಾಥ್ ಹೇಳಿದರು.