ಗಂಗಾವತಿ(ಕೊಪ್ಪಳ): ಪಕ್ಷೇತರ ಅಭ್ಯರ್ಥಿಯಾಗಿ ಗಂಗಾವತಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆಸಲಿದ್ದಾರೆ ಎಂಬ ವದಂತಿಗಳ ನಡುವೆ ಮಾಜಿ ಸಚಿವ, ಗಣಿ ಉದ್ಯಮಿ ಜನಾರ್ದನ ರೆಡ್ಡಿ, ಮಂಗಳವಾರ ಕಾಲಿಗೆ ಗಾಲಿ ಕಟ್ಟಿಕೊಂಡವರಂತೆ ನಗರದಲ್ಲಿ ಓಡಾಡಿದರು.
ಸೋಮವಾರ ರಾತ್ರಿ ಪಂಪಾಸರೋವರದಲ್ಲಿ ತಂಗಿದ್ದ ರೆಡ್ಡಿ, ಮಂಗಳವಾರ ಬೆಳಗ್ಗೆ ಗಂಗಾವತಿಗೆ ಪ್ರವೇಶಿಸಿದ ಹಿರೇಜಂತಕಲ್ನಲ್ಲಿರುವ ಪೌರಾಣಿಕ ಪಂಪಾಪತಿ ದೇಗುಲಕ್ಕೆ ಭೇಟಿ ನೀಡಿದರು. ಬಳಿಕ ಅಂಬೇಡ್ಕರ್ ಅವರ ಕಂಚಿನ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಬಳಿಕ ನಗರದ ನಾನಾ ಕಾರ್ಯಕ್ರಮಗಳಿಗೆ ಮತ್ತು ಮುಖಂಡರ ಮನೆಗಳಿಗೆ ತೆರಳಿದ ರೆಡ್ಡಿ ಸೌಹಾರ್ದ ಚರ್ಚೆ ನಡೆಸುತ್ತಿದ್ದಾರೆ.
ಮುಖ್ಯವಾಗಿ ಬಿಜೆಪಿ ನಾಯಕರನ್ನೇ ಸೆಳೆಯುವ ತಂತ್ರ ಅನುಸರಿಸುತ್ತಿರುವ ರೆಡ್ಡಿ, ಬಿಜೆಪಿ ಪಕ್ಷದ ಎರಡು, ಮೂರನೇ ಹಂತದ ನಾಯಕರಿಗೆ ಗಾಳ ಹಾಕಿದ್ದಾರೆ. ರೆಡ್ಡಿ ಆಗಮನದಿಂದ ಪಕ್ಷದಲ್ಲಿರುವ ಕೆಲ ಅಸಮಾಧಾನಿತರಲ್ಲಿ ಸಂಚಲನ ಸೃಷ್ಟಿಯಾಗಿದೆ. ರೆಡ್ಡಿಯನ್ನು ಸ್ವತಃ ಬಿಜೆಪಿಗರು ರತ್ನಗಂಬಳಿ ಹಾಸಿ ಕರೆಯುತ್ತಿರುವುದು ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಜನಾರ್ದನ ರೆಡ್ಡಿ ಅವರು ಯಾವತ್ತಿದ್ದರೂ ಬಿಜೆಪಿ ಪರವಾಗಿ ಇರುತ್ತಾರೆ: ಸಾರಿಗೆ ಸಚಿವ ಬಿ ಶ್ರೀರಾಮುಲು