ಗಂಗಾವತಿ : ವಿವಿಧ ಪ್ರಕರಣಗಳಲ್ಲಿ ಬೇಕಾಗಿದ್ದ, ಕಳೆದ ಒಂದು ದಶಕದಿಂದ ತಲೆಮರೆಸಿಕೊಂಡಿದ್ದ ಅಂತಾರಾಜ್ಯ ಸುಲಿಗೆಕೋರನನ್ನು ಬಂಧಿಸುವಲ್ಲಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತನನ್ನು ನೆರೆಯ ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆ ಕಾವಲಿ ತಾಲೂಕಿನ ಕಪಾಲತಿಪ್ಪಾ ಗ್ರಾಮದ ಸಿ.ಹೆಚ್. ಬಾಬು ಶಂಕ್ರಯ್ಯ ಚಲ್ಲಾ ಎಂದು ಗುರುತಿಸಲಾಗಿದೆ. ಈತ ವೃತ್ತಿಪರ ಸುಲಿಗೆಕೋರನಾಗಿದ್ದು, ನಾನಾ ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿದ್ದ.
![interstate Robber arrested by Gangavati Police](https://etvbharatimages.akamaized.net/etvbharat/prod-images/kn-gvt-02-14-international-bloodsucker-arrest-by-gvt-police-pic-kac10005_14022021171836_1402f_1613303316_406.jpg)
ಓದಿ : ಜ್ಞಾನ ವೃದ್ಧಿಗೆ ಸಲೈನ್ ತೆಗೆದುಕೊಳ್ಳುವಂತೆ ಹೇಳಿದ ಶಿಕ್ಷಕನ ಬಂಧನ
ನಗರದಲ್ಲಿ 2008 ರಲ್ಲಿ ನಡೆದ ಒಂದು ಹಾಗೂ 2009 ರಲ್ಲಿ ನಡೆದ ನಾಲ್ಕು ಪ್ರಕರಣಗಳಿಗೆ ಸಂಬಂಧಪಟ್ಟಂತೆ ಆರೋಪಿ ಪೊಲೀಸರಿಗೆ ಬೇಕಾಗಿದ್ದ. ಒಟ್ಟು 4.05 ಲಕ್ಷ ಮೌಲ್ಯದ ಸ್ವತ್ತು ಕಳ್ಳತನ ಮತ್ತು ಸುಲಿಗೆ ಪ್ರಕರಣಗಳಲ್ಲಿ ಈತ ಪ್ರಮುಖ ಆರೋಪಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.