ಗಂಗಾವತಿ: ಸರಕು ಸಾಗಿಸುವ ಪ್ರತಿಷ್ಠಿತ ಖಾಸಗಿ ಸಂಸ್ಥೆ ಪ್ಯಾಕರ್ಸ್ ಅಂಡ್ ಮೂವರ್ಸ್ ಸಂಸ್ಥೆಗೆ ಸೇರಿದ ವಾಹನದಲ್ಲಿ ಕಸಾಯಿಖಾನೆ ಜಾನುವಾರುಗಳನ್ನು ಸಾಗಿಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ.
ಸರಕು ಸಾಗಾಣಿಕೆಯ ವಾಹನದಲ್ಲಿ ಪ್ರಾಣಿಗಳ ಆರ್ತನಾದ ಆಲಿಸಿದ ಶ್ರೀಕಾಂತ್ ಎಂಬುವರರು ಹಿಂಬಾಲಿಸಿದ್ದಾರೆ. ಕೊನೆಗೆ ನಗರದ ರಾಣಾ ಪ್ರತಾಪ್ ಸಿಂಗ್ ವೃತ್ತದಲ್ಲಿ ವಾಹನ ನಿಲ್ಲಿಸಿ ನೋಡಿದಾಗ ಒಳಗೆ ಆರು ಜಾನುವಾರುಗಳು ಇರುವುದು ಪತ್ತೆಯಾಗಿದೆ.
ಕೂಡಲೇ ವಾಹನ ತಡೆದು ಪೊಲೀಸ್ ಠಾಣೆಗೆ ಕರೆತಂದು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ವಾಹನ ಚಾಲಕ ಮತ್ತು ಕ್ಲೀನರ್ ವಶಕ್ಕೆ ಪಡೆದು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಶ್ರೀರಾಮನಗರದಿಂದ ಗಿಣಿಗೇರಾಕ್ಕೆ ಅಲ್ಲಿಂದ ಬೆಂಗಳೂರಿಗೆ ಜಾನುವಾರುಗಳನ್ನು ಕಳುಹಿಸಲಾಗುತಿತ್ತು ಎಂದು ಪೊಲೀಸರ ವಿಚಾರಣೆಯಲ್ಲಿ ವಾಹನದ ಚಾಲಕ ಮತ್ತು ಕ್ಲೀನರ್ ಮಾಹಿತಿ ನೀಡಿದ್ದಾರೆ.