ETV Bharat / state

ಐಎಎಸ್ ಪರೀಕ್ಷೆ: ಕನ್ನಡದಲ್ಲೂ ಬರೆಯಬಹುದು, ಪಾಸಾಗಬಹುದು: ಅಪೂರ್ವ ಬಾಸೂರು - UPSC Rank Holder Apoorva Basooru

2021-22ನೇ ಸಾಲಿನ ಕೇಂದ್ರದ ನಾಗರಿಕ ಪರೀಕ್ಷೆಯಲ್ಲಿ 191ನೇ ರ್‍ಯಾಂಕ್ ಗಳಿಸಿರುವ ಅಪೂರ್ವ ಬಾಸೂರು ಅವರ ವಿಶೇಷ ಸಂದರ್ಶನ ಇಲ್ಲಿದೆ.

UPSC rank Holder Apoorva Basooru
ಯುಪಿಎಸ್​ಸಿ ರ್‍ಯಾಂಕ್ ಹೋಲ್ಡರ್​ ಅಪೂರ್ವ ಬಾಸೂರು
author img

By

Published : Jun 9, 2022, 12:52 PM IST

ಗಂಗಾವತಿ : ಕೇಂದ್ರದ ನಾಗರಿಕ ಪರೀಕ್ಷೆ (ಐಎಎಸ್) ಬರೆಯಬೇಕು ಪಾಸಾಗಬೇಕು ಎಂಬುವುದು ಬಹಳಷ್ಟು ಜನರ ಕನಸಾಗಿರುತ್ತದೆ. ಆದರೆ, ಐಎಎಸ್​ ಬರೆಯಲು ಇಂಗ್ಲಿಷ್​ನಲ್ಲಿ ಹೆಚ್ಚಿನ ಪ್ರಾವೀಣ್ಯತೆ ಬೇಕಾಗುತ್ತದೆ ಎಂಬ ತಪ್ಪು ಕಲ್ಪನೆ ಬಹಳಷ್ಟು ಜನರಲ್ಲಿದೆ. ಐಎಎಸ್​ನ ಮುಖ್ಯ ಪರೀಕ್ಷೆಯಲ್ಲಿ ಕನ್ನಡಕ್ಕೂ ಅವಕಾಶವಿದ್ದು, ಕನ್ನಡವನ್ನು ಆಯ್ಕೆ ಮಾಡಿಕೊಂಡು ಕನ್ನಡದಲ್ಲಿಯೇ ಪರೀಕ್ಷೆ ಬರೆದರೂ ಪಾಸಾಗಬಹುದು ಎಂದು 2021-22ನೇ ಸಾಲಿನ ಕೇಂದ್ರದ ನಾಗರಿಕ ಪರೀಕ್ಷೆಯಲ್ಲಿ 191ನೇ ರ್‍ಯಾಂಕ್ ಗಳಿಸಿರುವ ಅಪೂರ್ವ ಬಾಸೂರು ಹೇಳಿದ್ದಾರೆ.

ಯುಪಿಎಸ್​ಸಿ ರ್‍ಯಾಂಕ್ ಹೋಲ್ಡರ್​ ಅಪೂರ್ವ ಬಾಸೂರು ಸಂದರ್ಶನ

ಈ ಬಗ್ಗೆ ಈಟಿವಿ ಭಾರತಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಕನ್ನಡ ಮಾಧ್ಯಮದಲ್ಲಿ ಓದಿದ್ದೇವೆ ಎಂಬ ಕೀಳಿರಿಮೆ ಬೇಡ. ಕನ್ನಡ ಮಾಧ್ಯಮದ ಮಕ್ಕಳೂ ಉತ್ತಮ ಸಾಧನೆ ಮಾಡಲು ನಾಗರಿಕ ಸೇವಾ ಪರೀಕ್ಷೆಯಲ್ಲಿ ವಿಫುಲ ಅವಕಾಶಗಳಿವೆ.

ಯಾವ ಪದವಿ ಯುಪಿಎಸ್​​​ಸಿ ಪರೀಕ್ಷೆಗೆ ಪೂರಕವಾಗುತ್ತದೆ ಎಂಬ ಕುತೂಹಲ ಬಹುತೇಕರಲ್ಲಿರುತ್ತದೆ. ಯಾವುದೇ ಪದವಿ ಮಾಡಿದ್ದರೂ ಸರಿ. ನೀವು ಆಯ್ಕೆ ಮಾಡಿ ಪದವಿ ಮಾಡಿದ ವಿಷಯದ ಕೇವಲ ಇಂತಿಷ್ಟು ಭಾಗ ಮಾತ್ರ ಯುಪಿಎಸ್​​​ಸಿ ಪರೀಕ್ಷೆಯಲ್ಲಿ ವಿಷಯ ಇರುತ್ತದೆ.

ಮುಖ್ಯವಾಗಿ ಸತತ ಪರಿಶ್ರಮ, ಆಳವಾದ ಅಧ್ಯಯನ, ವಿಷಯ ಮನವರಿಕೆ ಸಾಮರ್ಥ್ಯ, ಕ್ರಿಯಾಶೀಲತೆ, ವಿಷಯಗಳನ್ನು ಅರಿಯುವ ಕುತೂಹಲ ಇತ್ಯಾದಿ ಅಂಶಗಳು ನಮ್ಮ ಅಧ್ಯಯನ ಮತ್ತು ಪರೀಕ್ಷಾ ಸಿದ್ಧತೆಗೆ ಪೂರಕವಾಗಿರುತ್ತವೆ. ನನ್ನ ಸಾಧನೆ ಹಿಂದೆ ನನ್ನ ಕುಟುಂಬ ಸದಸ್ಯರ ತ್ಯಾಗವಿದೆ. ಮುಖ್ಯವಾಗಿ ನನ್ನ ತಾಯಿ ನನ್ನೊಂದಿಗೆ ಇದ್ದು, ದೆಹಲಿಯಲ್ಲಿ ಕಳೆದ ಕ್ಷಣಗಳು, ಮಾಡಿದ ಕೆಲಸ, ನಿತ್ಯ ನನಗೆ ನೀಡುತ್ತಿದ್ದ ಬೆಂಬಲ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು.

ಇದನ್ನೂ ಓದಿ: ಸೋಲೇ ಗೆಲುವಿನ ಮೆಟ್ಟಿಲು: ಯಪಿಎಸ್​​ಸಿ ಪರೀಕ್ಷೆ ಪಾಸ್ ಮಾಡಿದ ಬಸ್​ ಡ್ರೈವರ್ ಮಗಳು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.